ಮಹಾಲಿಂಗಪುರ ಡಿ., ೨೪ :- ಸರ್ಕಾರಿ ಶಾಲಾ ಮಕ್ಕಳಿಗೆ ಆಟವಾಡಲು ಯಾವುದೇ ತೊಂದರೆಯಾಗದಂತೆ ಶೌಚ್ಚಾಲಯ ನಿರ್ಮಾಣ ಮಾಡಿ ಮತ್ತು ಕಾಮಗಾರಿ ಶುದ್ದ ಮತ್ತು ಗುಣಮಟ್ಟದ್ದಾಗಿರಲಿ ಎಂದು ತೇರದಾಳ ಮತ ಕ್ಷೇತ್ರದ ಶಾಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಮತ್ತು ಮುಧೋಳ ಪಂ.ರಾ, ಇಂ ಉಪವಿಭಾಗದ ೨೦೨೨-೨೩ ನೇ ಸಾಲೀನ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕೇಂದ್ರ ಸರ್ಕಾರದ ವಾರ್ಷಿಕ ಕ್ರೀಯಾ ಯೋಜನೆ ಅನುದಾನದಲ್ಲಿ ಅಂದಾಜು ೨೦ ಲಕ್ಷ ರೂ ವೆಚ್ಚದಲ್ಲಿ ಶೌಚ್ಚಾಲಯ ಮತ್ತು ಶಾಲೆ ವಿವಿದ ದುರಸ್ಥಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸರ್ಕಾರ ಪ್ರತಿವರ್ಷ ತರುವ ವಿವಿಧ ಯೋಜನೆಗಳು ಸಕಾಲದಲ್ಲಿ ಸಾರ್ವಜನಿಕರಿಗೆ ಮುಟ್ಟಬೇಕು, ಮತ್ತು ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿವರ್ಷ ಸಾಕಷ್ಟು ಹಣ ಖರ್ಚು ಮಾಡಿ ಸರ್ಕಾರಿ ಶಾಲೆಗಳ ಸುಧಾರಣೆ ಮಾಡುತ್ತಲೆ ಬಂದಿವೆ, ಕಾರಣ ಸರ್ಕಾರದ ಹಣ ಪೋಲಾಗ ಬಾರದು ಹಾಗೂ ಶಿಕ್ಷಕರು ಸಹ ಇಂಥ ಕಾಮಗಾ ರಿಗಳ ಗುಣಮಟ್ಟ ಸರಿಯಾಗುವಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶೇಖರ ಅಂಗಡಿ, ಚನಬಸು ಯರಗಟ್ಟಿ, ಚನ್ನಪ್ಪ ಪಟ್ಟಣಶೆಟ್ಟಿ, ವಿರೇಶ ಮುಂಡಗನೂರ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ಬಸವರಾಜ ಗಿರಿಸಾಗರ, ಸಂದೀಪ ಸುರಗೋಂಡ, ಮಾಹಾಂತೇಶ ಪಾತ್ರೋಟ, ಬಸು ಮಡ್ಡೇನ್ನವರ, ಎಸ್.ಡಿ.ಎಂ.ಸಿ ಅಧ್ಯಕ್ಷ ಉಸ್ಮಾನ ಪೆಂಡಾರ, ಬಸು ಮಡಿವಾಳ, ಗಿರೇಪ್ಪ ಕಬಾಡಿ, ಎಂ.ಎಸ್ ಬಿ ಪಾಟೀಲ, ವೈ .ವೈ ತಂಬೂರಿ, ಎಂ.ಆರ್. ಚಿತ್ರಗಾರ. ಲತಾ ಪೂಜೇರಿ, ಎಸ್.ಐ ಗದಗ, ಗುರು ಪೂಜಾರಿ ಸೇರಿದಂತೆ ಹಲವರು ಇದ್ದರು.
ಸರ್ಕಾರಿ ಶಾಲೆ ಮಕ್ಕಳಿಗೆ ಆಟವಾಡಲು ತೊಂದರೆಯಾಗದಂತೆ ಶೌಚ್ಚಾಲಯ ನಿರ್ಮಿಸಿ : ಸವದಿ


