ಬಳ್ಳಾರಿ,ಡಿ.25.,:- ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಜ್ಞಾವಂತ ನಾಗರಿಕರ ವೇದಿಕೆ ಮನವಿ ಪತ್ರ ಸಲ್ಲಿಸಿದೆ.
ಬಾಂಗ್ಲಾದೇಶ ದಲ್ಲಿಇತ್ತೀಚಿಗೆ ಹಿಂದೂಯುವಕ ದೀಪು ಚಂದ್ರದಾಸ್ಇವರನ್ನು ಪೋಲೀಸರ ಸಮಕ್ಷಮದಲ್ಲಿ ಮತಾಂಧರ ಗುಂಪೊAದು ಸಾಯುವವರೆಗೆ ಹಲ್ಲೆ ಮಾಡಿ ಅವನನ್ನು ಸಾಯಿಸಿ ನಂತರ ಬೆಂಕಿ ಹಚ್ಚಿ ಸುಟ್ಟಿರುವ ಪ್ರಕರಣ ಇಡೀಜಗತ್ತಿನ ಮನುಕುಲವನ್ನು ನೋವಿನಲ್ಲಿ ಮುಳುಗಿಸಿದೆ. ಬಾಂಗ್ಲಾದೇಶದಲ್ಲಿ ಮತಾಂದರು ದೀಪು ಚಂದ್ರದಾಸ್ರ ಬರ್ಬರ ಕೊಲೆಯ ನಂತರ ಅವರ ದೇದೇಶದ ಮುಸ್ಲಿಂ ಕುಟುಂಬದವರ ಮನೆಗೆ ಬೆಂಕಿ ಹಚ್ಚಿ ಮೂರು ವರ್ಷದ ಕಂದಮ್ಮನನ್ನು ಕೊಂದಿರುವರು. ಬಾಂಗ್ಲಾದೇಶದಲ್ಲಿ ಹಿಂದೂಕ್ರೆöÊಸ್ತ ಬೌದ್ಧ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ.ಆ ದೇಶದ ಸರ್ಕಾರ ನಿಷ್ಕಿಯವಾಗಿದೆ. ಬಾಂಗ್ಲಾ ಮತಾಂಧರು ವಿಶೇಷವಾಗಿ ಹಿಂದುಗಳ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದಾರೆ, ಹಿಂದುಗಳಿಗೆ ಬಾಂಗ್ಲಾ ಸರ್ಕಾರದ ರಕ್ಷಣೆ ಇಲ್ಲದಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆದೌರ್ಜನ್ಯ ಆಸ್ತಿ ನಷ್ಟ ಕೊಲೆಗಳನ್ನು ಖಂಡಿಸಿ ಇಂದು ಬಳ್ಳಾರಿಯ ಗಾಂಧಿ ಪ್ರತಿಮೆಯ ಮುಂಭಾಗ ಪ್ರಜ್ಞಾವಂತ ನಾಗರಿಕರ ವೇದಿಕೆಯ ಸದಸ್ಯರು ಸತ್ಯಾಗ್ರಹ ನಡೆಸಿ ಬಾಂಗ್ಲಾದೇಶದ ಹಿಂದೂಜನರನ್ನು ಕೊಲೆ ಮಾಡಿದಕೊಲೆಗಡಕರಿಗೆಗಲ್ಲು ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.ಜೊತೆಗೆ ಬಾಂಗ್ಲಾದೇಶದಲ್ಲಿಅಲ್ಪಸAಖ್ಯಾರ ಹಿಂದುಗಳ ರಕ್ಷಣೆಗಾಗಿ ಭಾರತ ಸರ್ಕಾರ ಹಾಗೂ ವಿಶ್ವಸಂಸ್ಥೆ ಬಾಂಗ್ಲಾಗೆ ಭೇಟಿ ನೀಡಿ ಬಾಂಗ್ಲಾದೇಶದಲ್ಲಿರುವ ಸಮಸ್ತ ಅಲ್ಪಸಂಖ್ಯಾತರರಕ್ಷಣೆಗೆ ಬಾಂಗ್ಲಾ ಸರ್ಕಾರರಕ್ಷಣೆಒದಗಿಸಬೇಕೆಂದು ನಿರ್ದೇಶನ ನೀಡಬೇಕೆಂದು ನಾಗರಿಕರು ಒತ್ತಾಯಿಸಿದರು. ಮಾನ್ಯ ಪ್ರಧಾನ ಮಂತ್ರಿಗಳು ಬಾಂಗ್ಲಾದೇಶದಲ್ಲಿ ನಡೆಯುವ ಹಿಂದೂಗಳ ಮೇಲಿನ ನರಮೇಧವನ್ನುಜಾಗತಿಕ ಸಮುದಾಯದ ಗಮನಕ್ಕೆ ತಂದು ಅವಶ್ಯವಿದ್ದಲ್ಲಿ ಮಿಲಿಟರಿಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದಲ್ಲಿ ನೂತನ ಪ್ರಜಾಸತ್ತಾತ್ಮಕಜಾತ್ಯಾತೀತ ಸರ್ಕಾರವನ್ನು ಸ್ಥಾಪಿಸುವ ಮೂಲಕ ಬಾಂಗ್ಲಾ ಮತಾಂದರಿಗೆ ಬುದ್ಧಿ ಕಲಿಸಬೇಕೆಂದು ಒತ್ತಾಯಿಸಿದೆ.
ಪ್ರಜ್ಞಾವಂತ ನಾಗರೀಕರ ವೇದಿಕೆ ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿಂಧವಾಳ್ ಮಹೇಶ್ಗೌಡ, ವಿಶ್ರಾಂತ ಪ್ರಾಂಶುಪಾಲರಾದ ಲಿಂಗನಗೌಡ ಪಾಟೀಲ್, ವಿ.ಎಸ್.ಪ್ರಭÀಯ್ಯ, ರೈತ ಸಂಘದ ದರೂರು ಪುರುಷೋತ್ತಮಗೌಡ, ಮಾಜಿಕಾರ್ಪೊರೇಟರ್ ಮಲ್ಲನಗೌಡ, ಹಿರಿಯ ನಾಗರಿಕರಾದ ಆನೆ ಗಂಗಣ್ಣ, ಪಿ.ಬಂಡೇಗೌಡ, ಎಂ.ಎಸ್.ಸೋಮಲಿAಗನಗೌಡ, ಬಿಪಿ.ಎಡವಳ್ಳಿ, ಹಳ್ಳಿಮನೆ ದೊಡ್ಡಬಸಪ್ಪ, ಅಮರೇಂದ್ರನಾಥಚೌದರಿ,ರೈಲ್ವೆ ಸಮಿತಿಯದರೂರು ಶಾಂತನಗೌಡ, ಕೆ.ಎಂ.ಚAದ್ರಮೌಳಿ, ಅಶೋಕ್ ದಿನ್ನಿ, ಬಿ.ಎಂ.ರ್ರಿಸ್ವಾಮಿ, ಕೋಳೂರು ಚಂದ್ರಶೇಖರ್ಗೌಡ, ಕೆ.ಎಂ.ಕೊಟ್ರೇಶ್, ಜಿ.ನೀಲಕಂಠಪ್ಪ, ಗಾದಿಲಿಂಗನಗೌಡ, ತಿಪ್ಪೇರುದ್ರಪ್ಪ, ಡಾ.ಮಂಜುನಾಥ, ಸೂರ್ಯ ಪ್ರಕಾಶ್, ಜಾಲಿಹಾಳ್ ಶ್ರೀಧರ್ ಗೌಡ, ಯೋಗಾಸಮಿತಿಯ ನಟರಾಜ್,ಗಂಗಾಧರಯ್ಯ, ಶಿವಾರೆಡ್ಡಿ,ರಾಜಶೇಖರ್ಮುಂತಾದವರು ಭಾಗವಹಿಸಿದ್ದರು.


