ಹುಕ್ಕೇರಿ: ಹುಕ್ಕೇರಿಯಲ್ಲಿರುವ ಸಂಘ, ಸಂಸ್ಥೆಗಳನ್ನು ಆರ್ಥಿಕವಾಗಿ ಬೀದಿಗೆ ತಂದ ಕತ್ತಿ ಕುಟುಂಬಸ್ಥರನ್ನು ಬೆಂಬಲಿಸದೇ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಅನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಹೇಳಿದರು.
ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಸತೀಶ್ ಅಣ್ಣಾ ಜಾರಕಿಹೊಳಿ ಅವರ ರಾಜಕೀಯ ಜೀವನವೇ ಅಭಿವೃದ್ಧಿಯಿಂದ ಕೂಡಿದೆ. ಸದಾ ಅವರ ಚಿಂತನೆಗಳು ಜನರ ಹಿತ ಕಾಪಾಡುವುದೇ ಆಗಿದ್ದು, ಈ ಚುನಾವಣೆಯಲ್ಲಿ ಅವರು ನೇಮಕಗೊಳಿಸಿರುವ ಅಭ್ಯರ್ಥಿಗಳು ಗೆಲ್ಲಿಸಬೇಕೆಂದರು.
ರಾಜ್ಯ ಯುವ ಕಾಂಗ್ರೆಸ್
ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಮಾತನಾಡಿ, ಕತ್ತಿ ಅವರ ದುರಾಡಳಿತ, ಅಲ್ಲಿನ ವ್ಯವಸ್ಥೆಗೆ ಹುಕ್ಕೇರಿ ಜನತೆ ನಮ್ಮ ಬಳಿ ಬಂದಿದ್ದರಿಂದ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಾವು ಕೈ ಜೋಡಿಸಿದ್ದೇವೆ. ಇಲ್ಲಿನ ಜನತೆಯ ಕಷ್ಟಗಳಿಗೆ ಸ್ಪಂದಿಸುವುದು ಅಷ್ಟೇ ನಮ್ಮ ಉದ್ದೇಶವಾಗಿದೆ. ಹೀಗಾಗಿ ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಮುಖಂಡ ಬಾಳೇಶ್ ಮಾವನೂರೆ ಮಾತನಾಡಿ, ಲಖನ್ ಜಾರಕಿಹೊಳಿ ಅವರು ಯಾವುದೇ ಹುದ್ದೆಯಲ್ಲಿ ಇಲ್ಲದಿದ್ದರೂ ಕಳೆದ 15 ವರ್ಷಗಳ ಹಿಂದೆಯೇ ನಮ್ಮೂರಿನ ದೇವಸ್ಥಾನ ನಿರ್ಮಾಣಕ್ಕಾಗಿ ತಲಾ 1 ಲಕ್ಷ ರೂ. ದೇಣಿಗೆ ನೀಡಿದ್ದರು. ರಾಹುಲ್ ಜಾರಕಿಹೊಳಿ ಅವರು ಮಾಸ್ತಿಹೊಳಿ ಸೇರಿದಂತೆ ಸುತ್ತಲಿನ ಆರೇಳು ಗ್ರಾಮದ ಯುವಕರಿಗೆ ಜಿಮ್ ಸಾಮಗ್ರಿಗಳನ್ನು ನೀಡಿದ್ದಾರೆ. ಅದಕ್ಕಾಗಿ ನಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುವವರು ಜಾರಕಿಹೊಳಿ ಮನೆತನದವರು, ಆದ್ದರಿಂದ ಸದಾ ನಾವು ಅವರ ಬೆಂಬಲಕ್ಕೆ ನಿಲ್ಲೋಣ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂಡರಾದ ದಯಾನಂದ ಪಾಟೀಲ್ ಸೇರಿದಂತೆ ಮಾಸ್ತಿಹೊಳಿ ಗ್ರಾಮದಲ್ಲಿ ಮುಖಂಡರು, ಯುವಕರು ಉಪಸ್ಥಿತರಿದ್ದರು.


