ಬೆಳಗಾವಿ: ಸೋಮವಾರದಂದು ಅಧಿಕೃತವಾಗಿ ನಾಮಪತ್ರ ಹಿಂಪಡೆವ ಕೊನೆ ದಿನವಾದ ಪ್ರಯುಕ್ತ ಮೊದಲೇ ನಿರೀಕ್ಷಿಸಿದಂತೆ ಅವಿರೋಧವಾಗಿ ಅಧಿಕೃತವಾಗಿ ಮೂಡಲಗಿ ತಾಲೂಕಿನಿಂದ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ ಆಯ್ಕೆಯಾದ ನೀಲಕಂಠ ಬಸವರಾಜ ಕಪ್ಪಲಗುದ್ದಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ರಾಜು ಕಾಗೆ ಸಮ್ಮುಖದಲ್ಲಿ ಹಾಗೂ ಅವರ ಅಭಿಮಾನಿಗಳ ಜೊತೆಯಲ್ಲಿ 3 ನೇ ಬಾರಿಗೆ ಡಿಸಿಸಿ ಬ್ಯಾಂಕ ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ ಸಂಭ್ರಮಾಚರಣೆ ಮಾಡಿದರು.