ಬಳ್ಳಾರಿ19..: ಶ್ರೀನಿಧಿ ಕಲಾ ಟ್ರಸ್ಟ್ ಬಳ್ಳಾರಿ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಯೋಜನೆ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮದಲ್ಲಿ ಶಶಿರೇಖ ಪರಿಣಯ ಅರ್ಥಾತ್ ಘಟೋತ್ಘಜನ ಮಾಯಾ ಆಟ ಬಯಲಾಟ ಪ್ರದರ್ಶನ ಇತ್ತೀಚಿಗೆ ಹಾಗಲೂರು ಗ್ರಾಮ ಸಿದ್ದಲಿಂಗೇಶ್ವರ ದೇವಸ್ಥಾನದ ಬಯಲು ವೇದಿಕೆಯಲ್ಲಿ ನಡೆಯಿತು.
ಬಾಲಕೃಷ್ಣ ಪಾತ್ರದಲ್ಲಿ ವೆಂಕಟೇಶ್, ದುರ್ಯೋದನ ಪಾತ್ರದಲ್ಲಿ ರಾಕೇಶ್, ಕರ್ಣನ ಪಾತ್ರದಲ್ಲಿ ರಂಗಪ್ಪ, ಬಲರಾಮ- ರವಿಚಂದ್ರ, ಕೃಷ್ಣ- ರಘುನಾಥ್, ನಾರದ – ಮಾರೇಶ್, ಅಭಿಮನ್ಯು- ಶೇಖಣ್ಣ, ಲಕ್ಷಣ- ಮೃತ್ಯುಂಜಯ, ಘಟೋತ್ಘಜನ ಪಾತ್ರದಲ್ಲಿ ವೆಂಕಟೇಶ ಅವರು ಅಭಿನಯಿಸಿ ನೆರೆದಿದ್ದ ಪ್ರೇಕ್ಷಕರ ಮನ ಸೂರೆಗೊಂಡರು.
ಅತಿಥಿಗಳಾಗಿ ಶ್ರೀನಿಧಿ ಕಲಾಟ್ರಸ್ಟ್ ಅಧ್ಯಕ್ಷ ಶ್ರೀನಿಧಿ, ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ, ಹೊಸಹಳ್ಳಿ ಗ್ರಾಮದ ಮುಖಂಡರಾದ ಜಯಷ್ಣ, ರಾಘವೇಂದ್ರ ರೆಡ್ಡಿ, ಮಲ್ಲಯ್ಯ, ನಾಗೇಶಪ್ಪ, ಮಾರೆಪ್ಪ, ಕುರುವಳ್ಳಿ ವೆಂಕಟರೆಡ್ಡಿ, ಎಣ್ಣೆ ವೆಂಕಟೇಶಪ್ಪ, ಗಾಂಧಿ ಸಿದ್ದಪ್ಪ, ಮಂಜುನಾಥ, ಜೆ.ಈರಣ್ಣ, ಬಳದೂರು ಪ್ರಕಾಶ್ ರೆಡ್ಡಿ, ಪೋತಯ್ಯ, ಹಾಗಲೂರು ಹೊಸಹಳ್ಳಿ ಗ್ರಾ.ಪಂ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕೇರಿಯ ಮುಖಂಡರು ಭಾಗವಹಿಸಿದ್ದರು.


