ಮುಗಳಖೋಡ (೨೭) ರೈತಾಪಿ ಕುಟುಂಬದ ನೋವಿಗೆ ಸ್ಪಂದಿಸದ ಸರ್ಕಾರಗಳಿಗೆ ಎಚ್ಚರಿಕೆ ಮೂಡಿಸಲು ರೈತರು ಸಂಘಟಿತರಾಗಿ ಹೋರಾಟದಿಂದ ರೈತರು ತಮ್ಮ ಹಕ್ಕನ್ನು ಪಡೆಯುವ ಸಿದ್ಧತೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚೂನಪ್ಪಾ ಪೂಜೇರಿ ಕರೆನೀಡಿದರು.ಅವರು ಗುರುವಾರ 17 ರಂದು ಮುಗಳಖೋಡ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ 21 ರಂದು ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತ ಭವನ,ಅಥಣಿ -ಗೋಕಾಕ ರಸ್ತೆ ಯಲ್ಲಿ ಕೈಗೊಂಡು 45 ನೇ ರೈತ ಹುತಾತ್ಮ ದಿನಾಚರಣೆ ಬೃಹತ್ ಸಮಾವೇಶ ಹಾಗೂ ಪ್ರಗತಿಪರ ರೈತರಿಗೆ ಮತ್ತು ವೈದ್ಯರಿಗೆ ಸನ್ಮಾನ ಸಮಾರಂಭದ ನಿಮಿತ್ಯ ಕರೆದ ಪತ್ರಿಕಾಗೋಷ್ಠಿಯಲ್ಲಿ ಅನ್ನದಾತನಿಗೆ ಸರ್ಕಾರ ಹಾಗೂ ಮದ್ಯೆವರ್ತಿಗಳಿಂದ ಸರಿಯಾದ ಬೆಲೆ ಹಾಗೂ ಅವಶ್ಯ ಮೂಲ ಸೌಕರ್ಯ ಸಿಗದೆ ಕಂಗಾಲಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ತಮ್ಮ ಹಕ್ಕನ್ನು ಪಡೆಯಲು 45 ವರ್ಷಗಳ ಹಿಂದೆ ನಡೆದ ಹೋರಾಟದಲ್ಲಿ ಅಂದಿನ ಸರ್ಕಾರ ಗುಂಡು ಹಾರಿಸಿ ರೈತರ ಪ್ರಾಣ ತೆಗೆದಿತ್ತು, ಆ ಹುತಾತ್ಮರ ಸ್ಮರಣೆಯಲ್ಲಿ ಸಮಸ್ಯೆ, ಸಂಘಟನೆ, ಹೋರಾಟ, ಪರಿಹಾರಕ್ಕೆ ಆಯೋಜಿದ ಸಮಾರಂಭಕ್ಕೆ ಸುಕ್ಷೇತ್ರ ಮುಗಳಖೋಡದ
ಪೂಜ್ಯ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು,ಮಖನಾಪುರದ ಪೂಜ್ಯ ಸೋಮೇಶ್ವರ ಮಹಾಸ್ವಾಮಿಗಳು, ಗೋಕಾಕ ಆಧ್ಯಾತ್ಮ ಕೇಂದ್ರದ ಮಾತೋಶ್ರೀ
ಸುವರ್ಣತಾಯಿನ್,ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು, ಶ್ರೀಗಿರಿಮಠದ ಡಾ.ಚನ್ನಮಲ್ಲಿಕಾರ್ಜುನ ಶ್ರೀ, ಗೋಕಾಕದ ಮುರುಘರಾಜೇಂದ್ರ ಸ್ವಾಮೀಜಿ, ಕೂಡಲಸಂಗಮದ ಡಾ.ಬಸವಪ್ರಕಾಶ ಸ್ವಾಮೀಜಿ,ತೆಲಸಂಗದ ಸಂಗಮೇಶ ಸ್ವಾಮೀಜಿ, ದಿವ್ಯ ಸಾನಿಧ್ಯದಲ್ಲಿ, ಪರಮಪೂಜ್ಯ ಶಶಿಕಾಂತ ಗುರುಜಿ ದಿವ್ಯ ನೇತೃತ್ವದಲ್ಲಿ, ರಾಜ್ಯ ಅಧ್ಯಕ್ಷ ಚೂನಪ್ಪಾ ಪೂಜೇರಿ, ಅಥಣಿ ತಾಲೂಕಾ ಅಧ್ಯಕ್ಷ ಮುಬಾರಕ ತಾಂಬೋಳಿ ಅಧ್ಯಕ್ಷತೆಯಲ್ಲಿ
ಸಮಾರಂಭ ಆಯೋಜಿಸಲಾಗಿದೆ ರೈತ ಬಾಂಧವರು ಭಾಗವಹಿಸಿ ಬಲ ನಿಡಿ ಎಂದು ಗೌರವಾಧ್ಯಕ್ಷ ಶಶಿಕಾಂತ ಗುರುಜಿ , ರಾಜ್ಯಾಧ್ಯಕ್ಷ ಚೂನಪ್ಪಾ ಪೂಜೇರಿ ಕರೆನೀಡಿದರು.
ಮುಖಂಡರಾದ ನಿಂಗಪ್ಪ ಪಾಕಂಡಿ, ಕಾಶಪ್ಪ ಜಂಬಗಿ, ಹಣಮಂತ ಬಳಿಗಾರ, ರಾಜು ಪವಾರ,ಕಲ್ಲನಗೌಡ ಪಾಟೀಲ, ಮಹಾದೇವ ಹೋಳಕರ, ನಾಗಪ್ಪ ಬಳಿಗಾರ,ಶಿವಬಸು ಕಾಪಶಿ, ರಾಮಪ್ಪ ಬಳಿಗಾರ, ರಮೇಶ ಕಲ್ಲಾರ,ಕುಮಾರ ಮರ್ಡಿ, ಮಲ್ಲಪ್ಪ ಅಂಗಡಿ,ಬಾಬುಗೌಡ ಪಾಟೀಲ ಭರಮಪ್ಪ ಚುಮ್ಮಡ, ಇದ್ದರು
ಪೋಟೋ… ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರು.