ಚಿಕ್ಕೋಡಿ: ನಿಪ್ಪಾಣಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ೧೦ ಕೋಟಿ ರೂಪಾಯಿ ಮೊತ್ತದ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಅನೂದಾನ ಮಂಜೂರು ಶಾಸಕಿ ಶಶಿಕಲಾ ಜೊಲ್ಲೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ೨೦೨೪-೨೫ ನ ಸಾಲಿನ ಮಳೆ ಪರಿಹಾರ ಲೆಕ್ಕ ಶೀರ್ಷಿಕೆ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಮಂಜೂರಾಗಿದ್ದು ಈ ಕೆಳಗಿನಂತಿವೆ.
೧) ನಿಪ್ಪಾಣಿ ತಾಲೂಕಿನ ಬುದಲಮುಖ ಗ್ರಾಮದ ಜೋತಿರಾಮ ಚೌವಾನ ಮನೆಯಿಂದಾ ಮಹಾರಾಷ್ಟç ಗಡಿಯವರೆಗೆ ರಸ್ತೆ ಡಾಂಬರೀಕರಣ ಮಾಡುವುದು (೧.೧೦ ಕಿ.ಮಿ) ೮೦.೦೦ ಲಕ್ಷ ರೂ.
೨) ನಿಪ್ಪಾಣಿ ತಾಲೂಕಿನ ಯರನಾಳ ಗ್ರಾಮದಿಂದ ವಾಗಧಾರಾ ಕೆರೆಯ ವರೆಗೆ ರಸ್ತೆ ಡಾಂಬರೀಕರಣ ಮಾಡುವುದು (೧.೭೦ ಕಿ.ಮಿ) ೯೦.೦೦ ಲಕ್ಷ ರೂ.
೩) ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದ ಬಸ್ ನಿಲ್ದಾಣದಿಂದ ಗರೀಬ ವಸಾಹತುಗಳ ಕಡೆಗೆ ಹೋಗುವ ರಸ್ತೆಗೆ ಡಾಂಬರೀಕರಣ ಮಾಡುವುದು (೨.೦೦ ಕಿ.ಮಿ) ೯೦.೦೦ ಲಕ್ಷ ರೂ.
೪) ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದಿಂದ ಬೂದಿಹಾಳ ಗ್ರಾಮದ ವರೆಗೆ ರಸ್ತೆ ಡಾಂಬರೀಕರಣ ಮಾಡುವುದು (೨.೦೩ ಕಿ.ಮಿ) ೭೫.೦೦ ಲಕ್ಷ ರೂ.
೫) ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಎನ್ ಎಚ್ ೪ ರಸ್ತೆಯಿಂದ ನಾಗನೂರ ಗ್ರಾಮದ ಮುಖಾಂತರ ಶಿರಪೇವಾಡಿ ಕ್ರಾಸ್ ವರೆಗೆ ರಸ್ತೆ ಡಾಂಬರೀಕರಣ ಮಾಡುವುದು (೩.೧೨ ಕಿ.ಮಿ) ೧೧೦.೦೦ ಲಕ್ಷ ರೂ.
೬) ನಿಪ್ಪಾಣಿ ತಾಲೂಕಿನ ಗಾಯಕನವಾಡಿ ಮುಖ್ಯ ರಸ್ತೆಯಿಂದ ಮಹಾರಾಷ್ಟ್ರದ ಗಡಿಯವರೆಗೆ ರಸ್ತೆ ಡಾಂಬರೀಕರಣ ಮಾಡುವುದು (೦.೪೯೦ ಕಿ.ಮಿ) ೩೦.೦೦ ಲಕ್ಷ ರೂ.
೭) ನಿಪ್ಪಾಣಿ ತಾಲೂಕಿನ ಕುನ್ನೂರ ಗ್ರಾಮದ ಕುನ್ನೂರ ಮಾಂಗೂರ ಮುಖ್ಯ ರಸ್ತೆಯಿಂದ ಶಿವಾಪೂರವಾಡಿ ರಸ್ತೆ ಡಾಂಬರೀಕರಣ ಮಾಡುವುದು (೧.೦೦ ಕಿ.ಮಿ) ೫೦.೦೦ ಲಕ್ಷ ರೂ.
೮) ನಿಪ್ಪಾಣಿ ತಾಲೂಕಿನ ಬುದಲಮುಖ ರಸ್ತೆಗೆ ನಿರ್ಮಿಸಿರುವ ಬಾಕ್ಸ್ ಕಲ್ವರ್ಟಗೆ ಸಂರಕ್ಷಣಾ ಗೋಡೆ ಮತ್ತು ಅಪೂರ್ಣ ರಸ್ತೆಯನ್ನು ಡಾಂಬರೀಕರಣ ಹಾಗೂ ಸಿ ಸಿ ರಸ್ತೆಯನ್ನು ಮಾಡುವುದು (೦.೧೦೦ ಕಿ.ಮಿ) ೪೫.೦೦ ಲಕ್ಷ ರೂ.
೯) ನಿಪ್ಪಾಣಿ ತಾಲೂಕಿನ ಭೀವಶಿ ಗ್ರಾಮದ ಥಳೋಬಾ ದೇವಸ್ಥಾನದಿಂದ ಆಡಿ ಗ್ರಾಮದ ವರೆಗೆ ಕೂಡು ರಸ್ತೆಯನ್ನು ಡಾಂಬರೀಕರಣ ಮಾಡುವುದು (೨.೮೦ ಕಿ.ಮಿ) ೧೪೦.೦೦ ಲಕ್ಷ ರೂ.
೧೦) ನಿಪ್ಪಾಣಿ ತಾಲೂಕಿನ ಶಿರಪೇವಾಡಿ ರಸ್ತೆಯಿಂದ (ವ್ಹಾಯಾ ಕಾಲೇಜ) ಎನ್ ಎಚ್ ೪ ರಸ್ತೆಗೆ ಕೂಡು ರಸ್ತೆ ಡಾಂಬರೀಕರಣ ಮಾಡುವುದು (೧.೫೦ ಕಿ.ಮಿ) ೯೦.೦೦ ಲಕ್ಷ ರೂ.
೧೧) ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಎನ್ ಎಚ್ ೪ ಸಹರಾ ಹೋಟಲದಿಂದ ವ್ಹಿ.ಎಸ್.ಎಮ್ ಕಾಲೇಜ ವರೆಗೆ ರಸ್ತೆ ಡಾಂಬರೀಕರಣ ಮಾಡುವುದು (೨.೭೦ ಕಿ.ಮಿ) ೧೧೦.೦೦ ಲಕ್ಷ ರೂ.
೧೨) ನಿಪ್ಪಾಣಿ ತಾಲೂಕಿನ ಕುನ್ನೂರ ಗ್ರಾಮದ ಸ್ಮಶಾನ ರಸ್ತೆಯಿಂದ ಹುನ್ನರಗಿ ಸೀಮೆಯ ವರೆಗೆ ರಸ್ತೆ ಡಾಂಬರೀಕರಣ ಮಾಡುವುದು (೧.೯೦ ಕಿ.ಮಿ) ೯೦.೦೦ ಲಕ್ಷ ರೂಪಾಯಿಗಳು ಮಂಜೂರಾಗಿವೆ ಎಂದು
ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.