ದೇಶ ಕಂಡ ಅಪ್ರತಿಮ ನಾಯಕ ಸರ್ದಾರ್ ವಲ್ಲಭಬಾಯ್ ಪಟೇಲ: ಸುಭಾಷ ಪಾಟೀಲ 

Ravi Talawar
ದೇಶ ಕಂಡ ಅಪ್ರತಿಮ ನಾಯಕ ಸರ್ದಾರ್ ವಲ್ಲಭಬಾಯ್ ಪಟೇಲ: ಸುಭಾಷ ಪಾಟೀಲ 
WhatsApp Group Join Now
Telegram Group Join Now
ಬೆಳಗಾವಿ. 1947ರ ಆಗಸ್ಟ್‌ 5ರಂದು ದಾಖಲೆಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಆದರೆ ದೇಶದಾದ್ಯಂತ ಹಬ್ಬಿದ್ದ ನೂರಾರು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವುದು ಸವಾಲೇ ಆಗಿತ್ತು. ಈ ಕೆಲಸವನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ರೈತ ಚಳವಳಿಯ ರೂವಾರಿ, ಗೃಹಸಚಿವರಾಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸಮರ್ಥವಾಗಿ ಮಾಡಿದರು.
ಪ್ರೀತಿ ಬಳಸುವಲ್ಲಿ ಪ್ರೀತಿಯಿಂದ, ದಂಡಪ್ರಯೋಗ ಮಾಡಬೇಕಾದಲ್ಲಿ ಅದರಿಂದ ಕೆಲಸ ಸಾಧಿಸಿದರು; ಒಕ್ಕೂಟ ಭಾರತವನ್ನು ಕಟ್ಟಿದರು. ಇಂದು ಭಾರತವೊಂದು ಒಕ್ಕೂಟವಾಗಿ ಉಳಿದಿದ್ದರೆ ಅದು ಅವರಿಂದಲೇ. ಅವರ ನೆನಪಿನಲ್ಲೇ ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದ ಸರಕಾರ ಪಟೇಲ್‌ ಅವರ ಜನ್ಮದಿನವಾದ ಅಕ್ಟೋಬರ್‌ 31ನ್ನು ‘ಏಕತಾ ದಿವಸ್‌’ ಎಂದು ಘೋಷಿಸಿದೆ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ (ಗ್ರಾಮಾಂತರ ) ಅಧ್ಯಕ್ಷ ಸುಭಾಷ ಪಾಟೀಲ  ಹೇಳಿದರು.
ಸೋಮವಾರದಂದು  ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲೆಯ ವತಿಯಿಂದ *ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನುಮದಿನದ ನಿಮಿತ್ತವಾಗಿ  “ರನ್ ಫಾರ್ ಯುನಿಟಿ”* ಅಂದರೆ *”ಏಕತೆಗಾಗಿ ಓಟ”* ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ 1919ರಲ್ಲಿ ಗುಜರಾತಿನ ಖೇಡಾ ಪ್ರಾಂತ ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. ಪಟೇಲರು ಹಳ್ಳಿಹಳ್ಳಿ ತಿರುಗಿ, ರಾಜ್ಯವ್ಯಾಪಿ ಆಂದೋಲನದಲ್ಲಿ ತೊಡಗಿಸಿದರು. ರಾಜ್ಯದೆಲ್ಲೆಡೆ ಎಲ್ಲರಿಗೂ ಪಟೇಲರ ನಾಯಕತ್ವ ಒಪ್ಪಿಗೆಯಾಯಿತು. ಬ್ರಿಟಿಷ್‌ ಅಧಿಕಾರಿಗಳ ದೌರ್ಜನ್ಯದ ನಡುವೆಯೂ ಹಿಂಸಾತ್ಮಕವಾಗಿ
ಸಾಗಿದ ಈ ಚಳವಳಿಗೆ ಸರಕಾರ ಮಣಿದು, ಕರವನ್ನು ಮುಂದೂಡಿತು. ಪಟೇಲರು ಈ ಸತ್ಯಾಗ್ರಹದಿಂದ ಮಹಾನಾಯಕ ಎಂದು ಗುಜರಾತಿ ಜನಮನ್ನಣೆ ಪಡೆದರು.
1919ರಿಂದ 1928ರವರೆಗೆ ಪಟೇಲರು, ಅಸ್ಪೃಶ್ಯತೆ, ಮದ್ಯಪಾನದ ವಿರುದ್ದ  ವ್ಯಾಪಕ ಚಳವಳಿ ನಡೆಸಿದರು. 1922ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷ ರಾಗಿ ವಿದ್ಯುತ್‌ ಸರಬರಾಜು, ಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ, ಹಾಗೂ ಶಿಕ್ಷ ಣ ವ್ಯವಸ್ಥೆಗಳಲ್ಲಿ ಭಾರಿ ಸುಧಾರಣೆ ತಂದರು. 1928ರಲ್ಲಿ ಬಾರ್ಡೋಲಿಯು ಕ್ಷಾಮಕ್ಕೀಡಾಯಿತು. ಸರಕಾರ ಕಂದಾಯವನ್ನು ಹೆಚ್ಚು ಮಾಡಿತು. ಇದರ ವಿರುದ್ಧ ಪಟೇಲರು ಜನಸಮೂಹವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆ ದೇಶದಲ್ಲೆಲ್ಲ ಹೆಸರು ಮಾಡಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾ.ಜ.ಪಾ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಶಾಸಕ ವಿಠ್ಠಲ್ ಹಲಗೆಕರ್, ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಮಹಾಪೌರರಾದ ಸವಿತಾ ಕಾಂಬಳೆ, ಮಾಜಿ ಶಾಸಕ ಅರವಿಂದ ಪಾಟೀಲ, ಭಾ.ಜ.ಪಾ ಮುಖಂಡ ರವಿ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾದಮ್ಮನವರ, ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ್ ಚೌಗಲೆ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಮಹೇಶ್ ಮೋಹಿತೆ,   ಪ್ರಶಾಂತ್ ಅಮ್ಮಿನಭಾವಿ, ಸುಭಾಷ್ ಸಣ್ಣವೀರಪ್ಪನವರ, ಚೇತನ್ ಅಂಗಡಿ, ಪ್ರಸಾದ್ ದೇವರಮನಿ, ವಿಠ್ಠಲ್ ಸಾಯಣ್ಣವರ,ಮನೋಜ್ ಪಾಟೀಲ್, ಪ್ರವೀಣ್ ಶಿಂಗಾರಿ, ನಾಗಪ್ಪ ಸಂಗೊಳ್ಳಿ , ಶ್ರೀಕಾಂತ್ ಬೆಲ್ಲದ, ಧನ್ಯಕುಮಾರ ಪಾಟೀಲ್ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು..
WhatsApp Group Join Now
Telegram Group Join Now
Share This Article