ಮಕ್ಕಳಿಗೆ ದೇಶಾಭಿಮಾನ ಬೆಳೆಸಿ: ಸಂತೋಷ್ ಮಠಪತಿ

Ravi Talawar
ಮಕ್ಕಳಿಗೆ ದೇಶಾಭಿಮಾನ ಬೆಳೆಸಿ: ಸಂತೋಷ್ ಮಠಪತಿ
WhatsApp Group Join Now
Telegram Group Join Now
ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ದಿನಾಚರಣೆ

ಬೆಳಗಾವಿ: ಪ್ರಾಥಮಿಕ ಹಂತದಲ್ಲೆ  ಮಕ್ಕಳಿಗೆ ದೇಶಾಭಿಮಾನ ಬೆಳೆಸಿ, ದೇಶದ ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು   ಸ್ಪೂರ್ತಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು,  ಮಾಜಿ ಸೈನಿಕರಾದ ಸಂತೋಷ್ ಮಠಪತಿ ಅವರು ಹೇಳಿದರು.

ನಗರದ  ಹಿಂದವಾಡಿಯಲ್ಲಿರುವ  ಗೊಮ್‌ಟೇಶ ವಿದ್ಯಾಪೀಠದಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ  ಸ್ವಾತಂತ್ರ್ಯೋತ್ಸವದ ದಿನಾಚರಣೆ ಕಾರ್ಯಕ್ರಮವನ್ನು  ನೆರವೇರಿಸಿ, ಭಾರತಾಂಬೆಗೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ  ಅವರು ಮಾತನಾಡಿದರು.

ಮಕ್ಕಳಲ್ಲಿ ಶಿಸ್ತು, ಸಂಯಮ, ಕರ್ತವ್ಯ ಪ್ರಜ್ಞೆ, ದೇಶಪ್ರೇಮ ಮೂಡಿಸಲು ಎಲ್ಲಾ ಕಾರ್ಯವನ್ನು ಮೊದಲಿನಿಂದಲೇ ಕಲಿಸಬೇಕು.  ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಮನೆಗೆ ಹೋಗಿ ಅವರ ಕುಟುಂಬಕ್ಕೆ ಒಂದೆರಡು ಸಾಂತ್ವಾನದ ಮಾತುಗಳನ್ನು ಹೇಳಿ ಬರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ಅವರಿಗೆ ಒಂದು ನೀಡುವ ಗೌರವವಾಗಿದೆ ಇದನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಹೇಳಿದರು.

ಹರ್ಷಾ ಆಶ್ರಮದ ಮಕ್ಕಳಿಂದ ಮತ್ತು ನಮ್ಮ ಮಂಡಳದ ಸದಸ್ಯರಿಂದ ಸಂಸ್ಕೃತಿಕ ಕಾರ್ಯಕ್ರಮ ಜರಗಿದವು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ  ಕೌನ್ಸಿಲರ್ ರಾಜು ಕೃಷ್ಣ ಮೇತ್ರಿ ಆಗಮಿಸಿದರು.  ಮಂಡಳದ ಅಧ್ಯಕ್ಷೇ  ಮಂಗಲ ಮಠ ದ ಸ್ವಾಗತಿಸಿದರು.  ಕಾರ್ಯದರ್ಶಿ ಭಾರತಿ ರತ್ನಪ್ಗೊಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಣಿಜಂತಿ ಪ್ರಾರ್ಥನಾ ಗೀತೆಯನ್ನು ಹಾಡಿದರು.ವಸುಂದರಾ ದೇಶ್ನೂರ್ ಅತಿಥಿಗಳ ಪರಿಚಯಿಸಿದರು. ವಾಣಿ  ಕಾರೇಕರ ನಿರೂಪಿಸಿದರು. ರೇಷ್ಮಾ ದಿವಟೆ ವಂದಿಸಿದರು.

WhatsApp Group Join Now
Telegram Group Join Now
Share This Article