ಸಂಸ್ಕೃತ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

Ravi Talawar
ಸಂಸ್ಕೃತ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ
WhatsApp Group Join Now
Telegram Group Join Now
ಬೆಳಗಾವಿ : ಕಾರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘo ಬೆಳಗಾವಿ ಘಟಕದ ವತಿಯಿಂದ ಎಸ್. ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಯಶಸ್ಸನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ 72 ವಿದ್ಯಾರ್ಥಿಗಳು ಸನ್ಮಾನವನ್ನು ಸ್ವೀಕರಿಸಿದರು.
 ಮುಖ್ಯ ಅತಿಥಿಗಳಾಗಿ ಉದ್ಯಮಿ ಚೈತನ್ಯ ಕುಲಕರ್ಣಿ ಆಗಮಿಸಿದ್ದರು. ಸಂಸ್ಕೃತವನ್ನು ಬೆಳೆಸಿ ಉಳಿಸಿಕೊಂಡು ಹೋಗಬೇಕಾಗಿದೆ. ಜಗತ್ತಿನ ಅತಿ ಪ್ರಾಚೀನ ಭಾಷೆ ಸಂಸ್ಕೃತವಾಗಿದೆ. ಸಂಸ್ಕೃತ ಅಧ್ಯಯನ ಮಾಡಲು ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘದ ನಾರಾಯಣ ಭಟ್ ವಹಿಸಿ, ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಸಂಸ್ಕೃತ ಹೆಚ್ಚಿನ ಅವಕಾಶ ನೀಡುತ್ತದೆ. ಎಲ್ಲರೂ ಸಂಸ್ಕೃತವನ್ನು ಓದಬೇಕು. ಕಂಪ್ಯೂಟರ್ ಗೆ ಹತ್ತಿರವಾದ ಭಾಷೆ ಸಂಸ್ಕೃತವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರಾದ  ಚಂದ್ರಶೇಖರ ಜೋಶಿ ಮತ್ತು ಸೂರ್ಯನಾರಾಯಣ ಭಟ್ ಇವರನ್ನು ಸನ್ಮಾನಿಸಲಾಯಿತು.
 ಚಿದಾನಂದ ಪಾಟೀಲ ಇವರು ಸಂಸ್ಕೃತ ಅಧ್ಯಯನದ ಅವಶ್ಯಕತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಟಿ. ಆರ್ . ಭಾಸ್ಕರಿ ಸ್ವಾಗತಿಸಿದರು. ಗೀತಾ ಸಿಂದಗಿ ಪರಿಚಯಿಸಿದರು. ರಾಮಚಂದ್ರ ಭಟ್ ಇವರು ಕಾರ್ಯಕ್ರಮವನ್ನು ಸಂಯೋಜಿಸಿ,ನಿರೂಪಿಸಿದರು. ಎಮ್. ಎ ಹಿರೇಮಠ ವಂದಿಸಿದರು.
WhatsApp Group Join Now
Telegram Group Join Now
Share This Article