ಸಂಗೀತದಿಂದ ಸಂಸ್ಕಾರ, ಮನಸ್ಸಿಗೆ ನೆಮ್ಮದಿ: ಕವಿತಾ ಕಗ್ಗಲ್ಲು

MK HasiruKranti
ಸಂಗೀತದಿಂದ ಸಂಸ್ಕಾರ, ಮನಸ್ಸಿಗೆ ನೆಮ್ಮದಿ: ಕವಿತಾ ಕಗ್ಗಲ್ಲು
WhatsApp Group Join Now
Telegram Group Join Now
ಬಳ್ಳಾರಿ:ಎ01.. ನಗರದ ಸಿರುಗುಪ್ಪ ರಸ್ತೆಯ ವಿರಾಟ್ ನಗರದ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆಯಲ್ಲಿ ಕಾವ್ಯಕಲಾ ಟ್ರಸ್ಟ್ ವತಿಯಿಂದ
 ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗಿತು
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸದ ಶ್ರೀ ಗುರು ಪುಟ್ಟರಾಜ ಸಂಗೀತ ಶಾಲೆ ಮುಖ್ಯಸ್ಥರಾದ ಕವಿತಾ ಕಗ್ಗಲ್ಲು ಅವರು ಮಾತನಾಡಿ,  ಸಂಗೀತದಿಂದ ಸಂಸ್ಕಾರ,  ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರೆಯುತ್ತದೆ. ಸಂಗೀತ ಪಾಠಶಾಲೆಯ ಮಕ್ಕಳು ಸಂತೋಷದಿಂದ ಭಾಗವಹಿಸುತ್ತಿದ್ದಾರೆ. ನೆರೆಹೊರೆ ಜನಸಹಿತ ಬೆಂಬಲ ನೀಡುತ್ತಿದ್ದಾರೆ ಇದು ಸಂಗೀತದ ಸೆಳೆತ ಎಂದರು.
ಅದ್ಯಕ್ಷತೆ ವಹಿಸಿದ್ದ ಸುಧಾಕರ ಅವರು ಮಾತನಾಡಿ, ಅಂಧ ಕಲಾವಿದರಿಗೆ ಸಂಗೀತ ಪಾಠಶಾಲೆಯಲ್ಲಿ ಸದಾ ಗೌರವದಿಂದ ಕಾಣುತ್ತಾರೆ. ಅವಕಾಶ ನೀಡುತ್ತಾರೆ. ಇದು ಸ್ನೇಹ ಹಾಗೂ ಕಲಾವಿದರ ಸಂಬಂಧ ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕ ದೊಡ್ಡ ಬಸವ ಗವಾಯಿ, ಕಾವ್ಯ ಕಲಾ ಟ್ರಸ್ಟ್ ಅಧ್ಯಕ್ಷರು ಹಾಗು ರಂಗಭೂಮಿ ಕಲಾವಿದರಾದ  ಬಿ,ವೀಣಾಕುಮಾರಿ, ಮುಖಂಡರಾದ
ಎರೇಗೌಡ ಗೆಣಿಕೆ ಹಾಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಚಾಂದ್ ಭಾಷ  ಕಾರ್ಯಕ್ರಮ ನಿರೂಪಿಸಿದರು.
WhatsApp Group Join Now
Telegram Group Join Now
Share This Article