ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸಂಕ್ರಾಂತಿ: ಪ್ರೇಮಾ ದೇವಿ

Hasiru Kranti
ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸಂಕ್ರಾಂತಿ: ಪ್ರೇಮಾ ದೇವಿ
WhatsApp Group Join Now
Telegram Group Join Now

ಬೆಳಗಾವಿ: ನಗರದ ಹಿಂದುವಾಡಿಯಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ ಹರಿಶಿನ ಕುಂಕುಮ ಕಾರ್ಯಕ್ರಮವನ್ನು ಪ್ರೇಮಾ ದೇವಿ ನಿಂಗಪ್ಪ ಅಣ್ಣಿಗೇರಿ ಮತ್ತು ಇಂದಿರಾ ಮಾಣಿಕ್ ಶಂಕರ್ ಗೌಡ ಇವರು ಭತ್ತದ ರಾಶಿಗೆ ಪೂಜೆ ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು.

ವೇಳೆ ಪ್ರೇಮಾದೇವಿ ನಿಂಗಪ್ಪ. ಅಣ್ಣಿಗೇರಿ ಅವರು ಮಾತನಾಡಿ, ಭಾರತೀಯ ಭವ್ಯ ಪರಂಪರೆ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳಿವೆ. ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸಂಕ್ರಾಂತಿ. ಎಳ್ಳು-ಬೆಲ್ಲ ವಿನಿಮಯದ ಮೂಲಕ ಪ್ರೀತಿ ಮತ್ತು ಸೌಹಾರ್ದತೆ ಹಂಚಿಕೊಳ್ಳುವುದು ಹಬ್ಬದ ವಿಶೇಷ. ಜಗತ್ತಿಗೆ ಅನ್ನ ನೀಡುವ ರೈತ ಜಗತ್ತಿಗೆ ಬೆಳಕು ನೋಡುವ ಸೂರ್ಯ ದೇವನನ್ನು ಸ್ಮರಿಸುವ ದಿನವಾಗಿದೆ ಎಂದು ಹೇಳಿದರು.

ಮಕರ ಸಂಕ್ರಾಂತಿ ಭಾರತೀಯ ಕೃಷಿ ಜೀವನದೊಂದಿಗೆ ಆಳವಾದ ಸಂಬಂಧ ಹೊಂದಿದೆ. ಇದು ಬೆಳೆ ಕಟಾವು ಮುಗಿಯುವ ಸಮಯವಾಗಿದ್ದು ರೈತರು ತಮ್ಮ ಶ್ರಮದ ಫಲವನ್ನು ಸಂಭ್ರಮದಿಂದ ಆಚರಿಸುವ ಕಾಲವಾಗಿದೆ. ಹೊಸ ಬೆಳೆ ಮನೆಗೆ ಬರುತ್ತಿರುವುದರಿಂದ ಸಂತೋಷ ಮತ್ತು ಸಮೃದ್ಧಿಯ ವಾತಾವರಣ ನಿರ್ಮಾಣವಾಗುತ್ತದೆ. ರೈತರು ಭೂಮಿಗೆ, ಸೂರ್ಯನಿಗೆ ಮತ್ತು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಈ ಹಬ್ಬವು ಮಾನವ ಮತ್ತು ಪ್ರಕೃತಿಯ ನಡುವಿನ ಆಳವಾದ ಬಾಂಧವ್ಯವನ್ನು ನೆನಪಿಸುತ್ತದೆ ಎಂದರು.

ಈ ವೇಳೆ ಇಂದಿರಾ ಮಾಣಿಕ್ ಶಂಕರಗೌಡ ಇವರು 80 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಕ್ಕೆ ಎರಡು ಮಂಡಳಗಳ ವತಿಯಿಂದ ಅವರಿಗೆ ಸನ್ಮಾನಿಸಲಾಯಿತು.

ಮಂಡಳದ ಎಲ್ಲ ಸದಸ್ಯರು ಅತ್ಯಂತ ಉತ್ಸಾಹದಿಂದ ಕಪ್ಪು ಬಣ್ಣದ ಸೀರೆಯನ್ನು ಧರಿಸಿ, ಪರಸ್ಪರ ಎಳ್ಳು ಬೆಲ್ಲ ನೀಡಿ ಅರಿಶಿನ ಕುಂಕುಮದ ಕಾರ್ಯಕ್ರಮವನ್ನು ಆಚರಿಸಿದರು.

ಮಂಡಲದ ಅಧ್ಯಕ್ಷರಾದ ಮಂಗಲಾ ಮಠದ ಸ್ವಾಗತಿಸಿದರು. ಆಶಾ ಹೊಸಮನಿ, ಶೈಲಾ ದೇಶಪಾಂಡೆ ಅತಿಥಿಗಳ ಪರಿಚಯ ಮಾಡಿದರು. ಗೀತಾ ಎಮ್ಮಿ, ರತ್ನಶ್ರೀ ಗುಡೆರ್ , ಮಮತಾ ಆಂಟಿನ, ಕಾರ್ಯಕ್ರಮದ ಪ್ರಾಯೋಜಕರಾದ ಪ್ರೇಮಾ ಉಪಾಧ್ಯಾ ನಿರೂಪಿಸಿದರು. ಕಾರ್ಯದರ್ಶಿ ಭಾರತಿ ರತ್ನಪಗೊಳ್ ವಂದಿಸಿದರು. ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article