ಬಳ್ಳಾರಿ ಏ 17. ನಿಮಗೆ ಲಭ್ಯವಿರುವ ಸ್ಥಳದಲ್ಲಿ ನಿಮ್ಮ ಬಜೆಟ್‌ಗೆ ತಕ್ಕಂತೆ ನಮ್ಮ ಮೈ ಸ್ಕಾಯ್ ಭಾರತ್ ಕನ್ಸ್ಟ್ರಕ್ಟಿಂಗ್ ಟೆಕ್ ಲಕ್ಸರಿ ಹೋಮ್ಸ್ ಕಂಪನಿಯಿಂದ ಅತ್ಯಂತ ಸುಸಜ್ಜಿತವಾದ ಮನೆಯನ್ನು ನಿರ್ಮಿಸಿಕೊಡಲಾಗುವುದು, ಆ ಮನೆಯಲ್ಲಿ ನೀವು ಸುಮಾರು ಹದಿನೈದು ವರ್ಷಗಳು ಕಳೆದರೂ ಸಹ ಹೊಸ ಮನೆಯಲ್ಲಿದ್ದಂತೆ ಭಾಸವಾಗುತ್ತದೆ ಮತ್ತು ಅನುಭವವಾಗುತ್ತದೆ ಎಂದು ಕಂಪನಿಯ ಮಾಲಿಕರಾದ ಸಂಕಲ್ಪ ಸಿಂಗ್ ಸೋಲಂಕಿ ತಿಳಿಸಿದರು.
ಅವರು ನಗರದ ಗಾಂಧಿನಗರದಲ್ಲಿನ ರೂಟ್ಸ್ ಫಂಕ್ಷನ್ ಹಾಲ್‌ನಲ್ಲಿ ತಮ್ಮ ಕಂಪನಿಯ ಆರಂಭ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ಇಪ್ಪತ್ತು ಅಡಿ ಅಗಲ ಮತ್ತು ಮೂವತ್ತು ಅಡಿ ಉದ್ದ ಜಾಗದಲ್ಲಿ ಬೆಡ್ ರೂಮ್, ಬಾತ್ ರೂಮ್, ಹಾಲ್, ಇಂಟೀರಿಯರ್ ಡೆಕೋರೇಷನ್, ಪೂಜಾ ಕೊಠಡಿ ಸೇರಿದಂತೆ ಒಳ್ಳೆಯ ಗಾರ್ಡನ್ ಹಾಗೂ ಸ್ವಿಮ್ಮಿಂಗ್ ಪೂಲ್ ಸಹ ನಿರ್ಮಿಸಿಕೊಟ್ಟ ಕೀರ್ತಿ ನಮ್ಮ ಕಂಪನಿಗಿದೆ, ಈಗಾಗಲೇ ನಮ್ಮ ಕಂಪನಿಯು ಬೆಂಗಳೂರು ಸೇರಿದಂತೆ ದೇಶದ ದೊಡ್ಡ ನಗರಗಳಲ್ಲಿ
ಕಾರ್ಯಚರಣೆ ಮಾಡುತ್ತಿದೆ, ಅದರಂತೆ ಬಳ್ಳಾರಿಯಲ್ಲಿ ಸಹ ಗ್ರಾಹಕರಿಗೆ ಅಥವಾ ಜನರಿಗೆ ಬೇಕಾದಂತ ಅವರ ಬಜೆಟಗ್ ತಕ್ಕಂತೆ ಮನೆಗಳನ್ನು ಸ್ಮಾರ್ಟ್ ಅಗಿ ಕಟ್ಟಿಕೊಟ್ಟು ಬಳ್ಳಾರಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುತ್ತೇವೆ ಎಂದರು.
ಅತ್ಯಂತ ಮುಖ್ಯವಾಗಿ ಮನೆ ನಿರ್ಮಾಣಕ್ಕೆ ಬೇಕಾದ ದಾಖಲೆಗಳು,ಸ್ಥಳೀಯ ಸಂಸ್ಥೇಗಳ ಅನುಮತಿ, ಸಾಲ ಸೌಲಭ್ಯ ಸೇರಿದಂತೆ ಎಲ್ಲಾ ಕೆಲಸವನ್ನು ನಮ್ಮ ಕಂಪನಿಯಿಂದ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದ್ದೇವೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಪಾರ್ವತಿ ನಗರದ ಕೆಹೆಚ್ಬಿ ಕಾಲನಿಯ ಅಯ್ಯಪ್ಪನ್ ಡು ಟವರ್ಸ್ ಹತ್ತಿರ ಇರುವ ನಮ್ಮ ಕಚೇರಿಗೆ ಅಥವಾ ರೀಜನಲ್ ಸೇಲ್ಸ್ ಹೆಡ್ ಸುಧಾರೆಡ್ಡಿ ೯೬೮೬೪ ೧೬೯೨೭ ಇವರನ್ನು ಸಂಪರ್ಕಿಸಲು ಕೋರಿದ್ದಾರೆ.
ಈ ಸಂಧರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ಲೀಪುರ ಮಠ ಕರೂರ್ ವಾದಿರಾಜ ಸ್ವಾಮಿಗಳು, ಕ್ಲೈಂಟ್ಗಳಾದ ಬಳ್ಳಾರಿಯ ಮಾರುತಿ ಸುಜುಕಿ ಶೋರೂಮಿನ ಸಿಇಓ ಗಳಾದ ವಿಜಯ್ ಆನಂದ್, ದೀಪಕ್,ಅತಿಥಿಗಳಾಗಿ ಮಹಿಪಾಲ್, ವಿಕ್ರಮ್ ಜಾಗಿರ್ದಾರ್, ಸ್ಕಂದಾನ್ಶಿ ಭೀಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.


