“ಸಂಜೀವಾಚಾರ್ಯ ಮದಭಾವಿ ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆ ಅಪಾರ”

Ravi Talawar
“ಸಂಜೀವಾಚಾರ್ಯ ಮದಭಾವಿ ಧಾರ್ಮಿಕ ಹಾಗೂ ಶೈಕ್ಷಣಿಕ  ಸೇವೆ ಅಪಾರ”
WhatsApp Group Join Now
Telegram Group Join Now

ವಿಜಯಪುರ: ಸಂಜೀವಾಚಾರ್ಯ ಮದಭಾವಿ ಅವರು ಕಳೆದ ಹಲವು ವರ್ಷಗಳಿಂದ ಸರ್ವಜ್ಞ ವಿಹಾರ ವಿದ್ಯಾಪೀಠದ ಮೂಲಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಶೈಕ್ಷಣಿಕ ಶಿಕ್ಷಣ ನೀಡುತ್ತಾ ಬಂದಿದ್ದು ಮುಂದೆ ಅವರ ಸಂಸ್ಥೆಯ ಅಡಿಯಲ್ಲಿ ಹನುಮಗಿರಿ, ವೈಕುಂಠಧಾಮ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ವಾನಪ್ರಸ್ಥಾಶ್ರಮ, ಗೋಶಾಲೆಯಂತಹ ಭವ್ಯ ಸಂಸ್ಥೆಗಳನ್ನು ಸ್ಥಾಪಿಸಿದರು.

ಮುಂದೆ ಗುರುಕುಲ ವಿದ್ಯಾಸಂಸ್ಥೆಯನ್ನು  ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರಿಂದ ಉದ್ಘಾಟಿಸಿ, ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲಿಟ್ಟರು. ನಂತರ ಯುವತಿಯರಿಗೆ ಧಾರ್ಮಿಕ ಹಾಗೂ ಶೈಕ್ಷಣಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕನ್ಯಾಗುರುಕುಲವನ್ನು ಪ್ರಾರಂಭಿಸಿದರು.

ತಮ್ಮೆಲ್ಲ ಸಂಘ ಸಂಸ್ಥೆಗಳ ಹೆಚ್ಚಿನ ಏಳಿಗೆಯಲ್ಲಿ ಪಾತ್ರವಹಿಸಲು, ವಿಶೇಷವಾಗಿ ತಮ್ಮ ಸಂಸ್ಥೆಯ ಯೋಜನೆಗಳನ್ನು, ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಲುವ ಹೆಚ್ಚಿನ ಜನರ ಸಹಕಾರ ಬೇಕಿದ್ದು ಆ ಜವಾಬ್ದಾರಿಯನ್ನು ಸಂಜೀವ ದೇಸಾಯಿ, ಗೋವಿಂದರಾಜ್ ದೇಶಪಾಂಡೆ, ವಿವೇಕ ತಾವರಗೇರಿ, ಸಂಪತ್ ಕುಮಾರ್ ಕುಲಕರ್ಣಿ, ಮೋಹನ್ ಕಾಳಗಿ, ರಾಜು ಕುಲಕರ್ಣಿ, ಜಯತೀರ್ಥ ಮಂಗಲಗಿ, ಮಧ್ವರಾಜ ದೇಸಾಯಿ, ಪವನ ಕುಲಕರ್ಣಿ ಇವರನ್ನು ತಮ್ಮ ಸಂಸ್ಥೆಗೆ ಸೇವೆ ಸಲ್ಲಿಸಲು ನೇಮಕ ಮಾಡಿದ್ದಾರೆ. ರವಿವಾರದ ಶುಭದಿನದಂದು ವೆಂಕಟೇಶ್ವರ ಸ್ವಾಮಿಯ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಸಂಸ್ಥೆಗೆ ಸೇವೆ ಸಲ್ಲಿಸಲು ಅನುಗ್ರಹಿಸಿದರು

WhatsApp Group Join Now
Telegram Group Join Now
Share This Article