ಕಾಗವಾಡ:ಪಟ್ಟಣದ ಬಸವನಗರದಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನರು ಅನೇಕ ವರ್ಷಗಳಿಂದ ವಾಸಿಸುತ್ತಿದ್ದು ಅವರಿಗೆ ಮನೆ ಹಕ್ಕುಪತ್ರ ಹಾಗೂ ಡಿಜಿಟಲ್ ಉತಾರ ಪೂರೈಸಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಂಜಯ ತಳವಳ್ಕರ್ ಒತ್ತಾಯಿಸಿದರು.
ಅವರು ಮಂಗಳವಾರ ದಿ.05 ರಂದು ಕಾಗವಾಡ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು.ಅವರು ಮುಂದೆ ಮಾತನಾಡುತ್ತಾ,ಕಾಗವಾಡ ಪಟ್ಟಣದ ಸರ್ವೆ ನಂ-23/ಅ ನೇದ್ದರ ಗಾಯರಾಣ ಜಾಗದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡವರು ಹಾಗೂ ಇನ್ನುಳಿದ ಸಮಾಜದವರು ಸಮಾರು 50 ವರ್ಷಗಳಿಂದ ವಾಸವಾಗಿದ್ದು,ಕೆಲ ಜನರಿಗೆ ಹಕ್ಕು ಪತ್ರಗಳನ್ನು ನೀಡಿದ್ದಾರೆ ಆದರೆ ಅವರು ಡಿಜಿಟಲ್ ಉತಾರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಅಷ್ಟೇ ಅಲ್ಲದೇ ಅದೇ ಗಾಯರಾಣ ಜಾಗದಲ್ಲಿ ಹಕ್ಕು ಪತ್ರ ವಂಚಿತ ಕುಟುಂಬಗಳು ವಾಸವಾಗಿದ್ದಾರೆ,ಕೂಡಲೇ ಅಧಿಕಾರಿಗಳು ಎಲ್ಲರಿಗೂ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.
ನಟ ಪ್ರಥಮ ಡಾ.ಅಂಬೇಡ್ಕರ್ ಬಗ್ಗೆ ಅವಹೇಳನ ಖಂಡನೆ:
ನಟ ಪ್ರಥಮ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದು,ಆತನಿಗೆ ಡಾ.ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಆತನಿಗಿಲ್ಲ ಇದನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ.ಮತ್ತು ಆತನ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಹೇಳಿದರು.
ಬೀಫ್ ಪ್ರಾರಂಭಿಸುವಂತೆ ಒತ್ತಾಯಿಸಿ ದಸಂಸ:
ಬೀಫ್ ಮಟನ್ ಸ್ಥಗಿತಗೊಳಿಸಲು ಅನೇಕ ಕುತಂತ್ರಿಗಳು ಕುತಂತ್ರ ಮಾಡುತ್ತಿದ್ದಾರೆ ಇದು ನಮ್ಮ ಮೊದಲಿನಿಂದ ಬಂದಿರುವ ಆಹಾರ ಪದ್ದತಿ ಅದನ್ನು ಮುಂದುವರೆಸಬೇಕೆಂದು ಒತ್ತಾಯಿಸಲಾಯಿತು. ಇನ್ನೂ ಬೀಫ್ ಸಂಭಂದಿತಕ್ಕೆ ಕೆಲವರು ನೈತಿಕ ಪೋಲಿಸ್ ಗಿರಿ ಮಾಡುತ್ತಿದ್ದು,ಅಂತವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು.
ನಂತರ ಗ್ರಾಮದ ಮುಖಂಡರಾದ ಜ್ಯೋತಿಗೌಡ ಪಾಟೀಲ್ ಮಾತನಾಡಿ,ಬಸವನಗರದಲ್ಲಿರುವ ಹಕ್ಕುಪತ್ರ ಹಾಗೂ ಆಸ್ತಿ ನೊಂದಣಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು,ಮುಖಂಡರು ಹೇಳಿದರೂ ಯಾವ ಅಧಿಕಾರಿಗಳು ಇದನ್ನು ಮಾಡಲಿಲ್ಲ ಇದಕ್ಕೆ ಪರಿಹಾರವಾಗಿ ಈ ಸ್ಥಳವನ್ನು ಸರ್ವೆ ಮಾಡುವ ಮೂಲಕ ಇದನ್ನು ಸ್ಲಂ ಏರಿಯಾ ಮಾಡಿದರೆ ಎಲ್ಲವೂ ಪರಿಹಾರವಾಗುತ್ತದೆ ಅದೇ ರೀತಿ ಸಂತ್ರಸ್ಥ ಗ್ರಾಮಗಳನ್ನ ಶಾಶ್ವತ ಪರಿಹಾರ ನೀಡಬೇಕರಂದು ಹೇಳಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿ ತಾಲ್ಲೂಕಾ ಅಧ್ಯಕ್ಷ ಸಚಿನ್ ಪೂಜಾರಿ,ಅಥಣಿ ತಾಲ್ಲೂಕಾಧ್ಯಕ್ಷ ರವಿ ಕಾಂಬಳೆ,ವಕೀಲರಾದ ಉಮೇಶ ಮನೋಜ,ಜಯಪಾಲ ಬಡಿಗೇರ,ಶಂಕರ ಕಾಂಬಳೆ,ವಿಧ್ಯಾಧರ ದೊಂಡಾರೆ,ಅರುಣ ಜೋಶಿ,ಪ್ರಕಾಶ ಕಾಂಬಳೆ,ಶಂಕರ ಕಾಂಬಳೆ, ಬಾಳಕೃಷ್ಣ ಭಜಂತ್ರಿ,ರಾಜು ದೊಂಡಾರೆ, ಪ್ರವೀಣ್ ದೊಂಡಾರೆ,ತಮ್ಮನ ಪಾಟೀಲ, ಸಾಗರ ಸೂರ್ಯವಂಶಿ,ಕಿರಣ ಸಂಭಾಳೆ,ಪಿಂಟು ಖಾನಾಯಿ,ಸಿದ್ದು ಭಾನುಸೆ,ಮಹಾಂತೇಶ ಬನಸೋಡೆ,ಮುಸ್ತಫಾ ಜಮಾದಾರ,ಶಿಲಾದಾರ ಚೌಹಾನ್,ರಾಜು ಪವಾರ,ಜನಾರ್ಧನ ದೊಂಡಾರೆ,ದೀಪಾ ಕಾಂಬಳೆ,ಮೀನಾ ಘೋರಡೆ,ಲಕ್ಷ್ಮೀ ಡೌರಿ,ರೇಖಾ ಕಸಬೆ ಸೇರಿದಂತೆ ಅನೇಕರು ಇದ್ದರು.