ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ

MK HasiruKranti
ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ
WhatsApp Group Join Now
Telegram Group Join Now
ಬಳ್ಳಾರಿ: 28..ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಶ್ರೀಶಂಭುಲಿಂಗೇಶ್ವರ ದೇವಸ್ಥಾನ ವೇದಿಕೆಯಲ್ಲಿ  ವಿಶ್ವರಂಗ ಭೂಮಿ ದಿನಾಚರಣೆ ಅಂಗವಾಗಿ ಕಾವ್ಯಕಲಾ ಟ್ರಸ್ಟ್ ಬಿಂದ ಸಂಸಾರದಲ್ಲಿ ಸನಿದಪ ಹಾಸ್ಯನಾಟಕ ಪ್ರದರ್ಶನ ನಡೆಯಿತು.
 ಕಾರ್ಯಕ್ರಮದ ಉದ್ಘಾಟನೆಯನ್ನು ದೇವಸ್ಥಾನ ಮಂಡಳಿ ಅಧ್ಯಕ್ಷ  ಹೂಗಾರು ಬಸವರಾಜ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಇಂದಿನ ಮೊಬೈಲ್ ಹಾವಳಿಯಿಂದ ದೂರವಿದ್ದು ನಾಟಕಗಳು ಮತ್ತಯ ಬಯಲಾಟಗಳನ್ನು ನೋಡುವ ಹವ್ಯಾಸ ಜನರು ಮೈಗೂಡಿಸಿಕೊಳ್ಳಬೇಕು. ನಾಟಕ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾಕುಮಾರಿ ಅವರು ಮಾತನಾಡಿ, ಕಲಾಭಿಮಾನಿಗಳು ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿದರೆ ಮಾತ್ರ ಕಲೆ ಜೀವಂತವಾಗಿ ಉಳಿಯಲು ಸಾಧ್ಯ ಎಂದರು.
 ಕಾರ್ಯಕ್ರಮದಲ್ಲಿ ಮುಖಂಡರಾದ ಪಂಪನ ಗೌಡ, ಏಳಬೆಂಚಿ ಮಲ್ಲಿಕಾರ್ಜುನ,
ಧನಂಜಯ,  ವಿಜಯಲಕ್ಷ್ಮೀ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article