ಬಳ್ಳಾರಿ :27. 77ನೇ ಗಣರಾಜ್ಯೋತ್ಸವದ ಅಂಗವಾಗಿ ಜ.26 ರಂದು ನಗರದ ಪಿ.ಎಲ್.ಡಿ ಬ್ಯಾಂಕ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ವಿ. ದೊಡ್ಡ ಕೇಶವರೆಡ್ಡಿ ನೇರವೆರಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಂವಿಧಾನದ ಭದ್ರ ಅಡಿಪಾಯವಾದ ಕಾನೂನಿನ ಚೌಕಟ್ಟಿನಿಂದ ಇಂದು ದೇಶದ ನಾಗರಿಕರೆಲ್ಲ ಸಮಾನತೆಯಿಂದ ಬದುಕಲು ಸಾಧ್ಯವಾಗಿದೆ.
ಗಣರಾಜ್ಯೋತ್ಸವಕ್ಕಾಗಿ ಶ್ರಮಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ತಂಡವನ್ನು ನಾವೆಲ್ಲರೂ ಸ್ಮರಿಸಬೇಕು.
ಸಮಾಜವಾದ ತತ್ವ, ಪ್ರಜಾಪ್ರಭುತ್ವ, ಗಣರಾಜ್ಯದ ಮತ್ತು ಜಾತ್ಯತೀತ ತತ್ವದ ಸಾರ್ವಭೌಮತ್ವವನ್ನು ಭಾರತ ಆಳವಡಿಸಿಕೊಂಡಿದ್ದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ, ಅನೇಕ ಭಾಷೆಗಳನ್ನು ಮಾತನಾಡುವ ಜನರನ್ನು ಹಾಗೂ ವಿವಿಧ ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿರುವುದು ವೈಶಿಷ್ಟಮಯವಾಗಿದೆ
ನಗರದಲ್ಲಿ ನಡೆದ ಕೆಲ ಗಲಾಟೆ ಗಳಿಂದ ನರದಲ್ಲಿ ಶಾಂತಿ ಭಂಗವಾಗಿ ಕಾನೂನು ವ್ಯವಸ್ಥೆ ಅದಕೆಟ್ಟಿದೆ.
ಇದನ್ನು ಪುನರ್ ಸ್ಥಾಪಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈ ಗೊಂಡಿರುವುದು ಸಂತೋಷ
ಅದರೆ ಜ.01 ರಂದು ನಡೆದ ಗಲಭೆಗೆ ಶ್ರೀರಾಮುಲು ಅವರು ಧ್ವನಿಕೊಟ್ಟಿದ್ದು ಜನರ ದೃಷ್ಟಿಯಲ್ಲಿ ಅಷ್ಟು ಸರಿಯಲ್ಲ. ಜನನಾಯಕ ಎಂದೆನಿಸಿ ಕೊಂಡ ರಾಮುಲು ಇಂತಹ ಗಲಾಭೆಗಳಲ್ಲಿ ಮೂಗು ತೂರಿಸುವುದು ಸರಿಯಿಲ್ಲ, ಹಣದ ವ್ಯವಸ್ಥೆಯಲ್ಲಿ ಮುಳುಗಿದ ಜನಪ್ರತಿನಿಧಿಗಳಿಗೆ ಜನರು ಕಾಣುತಿಲ್ಲ ನಾನೆಚ್ಚು ನಿಚ್ಚು ಎಂಬ ಮನೋಭಾವ ಅವರಿಸಿದೆ ಇದನ್ನು ತಿದ್ದುವ ಕೆಲಸ ರಾಮುಲು ಇಂದ ಅಗಲಿ.
ರಾಜಕೀಯದಲ್ಲಿ ಹಿರಿಯರು ಇರುವ ರಾಮುಲು ಅನುಭವ ಇಲ್ಲದ ಯುವ ನಾಯಕ ಭರತ್ ರೆಡ್ಡಿ ಮತ್ತು ಜನಾರ್ದನರೆಡ್ಡಿಯವರನ್ನು ಕೂರಿಸಿ ಸಂದಾನ ಮಾಡಿಸಲಿ ಎಂದರು. ಇಲ್ಲವಾದಲ್ಲಿ ನಗರ ರೌಡಿಗಳ ಜಿಲ್ಲೆಯಾಗಿ ಮಾರ್ಪಟ್ಟು ನಿತ್ಯ ಒಬ್ಬರನ್ನು ಒಬ್ಬರು ತಿವಿದುಕೊಂಡು ಸಾಯುವ ಸ್ಥಿತಿ ಕಾರ್ಯಕರ್ತರಿಗೆ ಬರುತ್ತೆ .
ಮೊನ್ನೆ ನಡೆದ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದು ಎಲ್ಲಾ ಪಕ್ಷದ ವರೆಗೂ ನೊವು ತಂದಿದೆ ಇಂತಹ ಘಟನೆ ನಗರದಲ್ಲಿ ಮರುಕಾಣಿಸದಿರಲಿ. ನಮ್ಮ ನಗರ ಸರ್ವ ಜನಾಂಗದ ಶಾಂತಿಯ ಹೂ ತೊಟ ಎಂಬಂತಿದೆ ಇದನ್ನು ಕಾಪಾಡಿಕೊಂಡು ಹೊಗುವುದು ಎಲ್ಲರೂ ಕರ್ತವ್ಯ ಎಂದರು.
ಈ ಸಂಧರ್ಭದಲ್ಲಿ ಗೋವಿಂದ ನಾಯ್ಕ್, ವರ ಬಸಪ್ಪ ಶಿದರಗಡ್ಡೆ , ಮಂಜುನಾಥ್ ಡಿ.ಎಂ, ಬಾಣಪುರ ಜಗದಿಶ್ ಗೌಡ, ದೀಪಕ್ ಕುಮಾರ್, ಪಾಲಕ್ಷ ರೆಡ್ಡಿ.ಮತ್ತಿತರ ಉಪಸ್ಥಿತರಿದ್ದರು.


