ಅಥಣಿ; ವೃಕ್ಷಮಾತೆ, ನಾಡೋಜ ಸಾಲುಮರದ ತಿಮ್ಮಕ್ಕನವರ ಪರಿಸರ ಪ್ರೀತಿ ನಮ್ಮೆಲ್ಲರಿಗೂ ಅನುಕರಣೀಯವಾಗಿದ್ದು, ತಿಮ್ಮಕ್ಕ ನೆಟ್ಟು ಬದುಕುಳಿದಿರುವ 312 ಮರಗಳ ರಕ್ಷಣೆಗೆ ಸರಕಾರ ಮತ್ತು ಸಂಘ ಸಂಸ್ಥೆಗಳು ಮುಂದಾಗುವ ಅಗತ್ಯವಿದೆ ಎಂದು ಎಜಿಆಯ್ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಐನಾಪುರ ರಸ್ತೆಯಲ್ಲಿರುವ ಅನ್ನಪೂರ್ಣ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಜರುಗಿದ ಸಾಲುಮರದ ತಿಮ್ಮಕ್ಕನಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ತಿಮ್ಮಕ್ಕನವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು.
ಅವರು ಹಾಕಿಕೊಟ್ಟ ದಾರಿಯಲ್ಲಿಯೇ ನಡೆದು, ಪ್ರತಿಯೊಬ್ಬರು ಕನಿಷ್ಠ ಒಂದೊಂದು ಮರವನ್ನಾದರೂ ನೆಡುವ ಸಂಕಲ್ಪದೊಂದಿಗೆ ಪರಿಸರ ಕಾಳಜಿಯನ್ನು ಮೆರೆಯಬೇಕೆಂದರು.
ಈ ಸಂದರ್ಭದಲ್ಲಿ ಬಿಎಸ್ಸಿ(ನರ್ಸಿಂಗ್) ಪ್ರಾಚಾರ್ಯ ಪ್ರೊ. ಮಹಾಂತೇಶ ಮಿರ್ಜಿ, ಪ್ರೊ. ಜಮೀರ್ ಮುಲ್ಲಾ, ಡಾ. ಕುಮಾರ ತಳವಾರ, ಪ್ರೊ. ಮಹೇಶ ಬ್ಯಾಳಗೌಡರ, ಪ್ರತಿಕ್ಷಾ ಶಿಂಧೆ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


