ಅಭಿಮಾನಿಗೆ ಕಿಡ್ನಿ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಸಾಹುಕಾರ್‌

Ravi Talawar
ಅಭಿಮಾನಿಗೆ ಕಿಡ್ನಿ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಸಾಹುಕಾರ್‌
WhatsApp Group Join Now
Telegram Group Join Now
ಬೆಳಗಾವಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು  ಮಾನವೀಯತೆ ಮೆರೆದಿದ್ದಾರೆ.
ಹೌದು…. ಗೋಕಾಕ ತಾಲೂಕಿನ ನಿವಾಸಿ ದಸ್ತಗೀರ ಮೋಘಲ ಎಂಬುವರು ಸುಮಾರು ವರ್ಷಗಳಿಂದ   ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.  ಬಡ ಕುಟುಂಬವಾದ ದಸ್ತಗೀರಗೆ  ಚಿಕಿತ್ಸೆ ಪಡೆಯಲು ಹಣದ ಅವಶ್ಯಕತೆ ಇತ್ತು. ಇದನ್ನು ಮನಗಂಡ ಸಚಿವ ಸತೀಶ್‌ ಜಾರಕಿಹೊಳಿ ಅವರು, ತಮ್ಮ ಆಪ್ತರ ಮೂಲಕ  ಹಣವನ್ನು ನೀಡಿ ದಸ್ತಗೀರ ಕುಟುಂಬಕ್ಕೆ ತಲುಪಿಸಿದ್ದಾರೆ. ಸಚಿವ ಸತೀಶ್‌ ಜಾರಕಿಹೊಳಿ ಅವರ ಈ ಸಹಾಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಹುಕಾರ್‌ಗೆ ಸನ್ಮಾನಿಸಿದ ದಸ್ತಗೀರ: ಕಿಡ್ನಿ ಶಸ್ತ್ರ ಚಿಕಿತ್ಸೆಯಿಂದ ಗುಣಮುಖರಾಗಿ ಬಂದ ದಸ್ತಗೀರ ಮೋಘಲ ಅವರು ಗೋಕಾಕನಲ್ಲಿರುವ ಹಿಲ್‌ ಗಾರ್ಡನ್‌ ನಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಶಾಲು ಹೊದಿಸಿ ಹೂಮಾಲೆ ಹಾಕುವ ಮೂಲಕ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ  ದಸ್ತಗೀರ ಮೋಘಲ ಅವರು ಮಾತನಾಡಿ, ನನಗೆ ಕಿಡ್ನಿ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಒಳ್ಳೆಯದಾಗಲಿ. ಇವರು ಇತರರಿಗೆ  ಬಹಳಷ್ಟು ಕಣ್ಣಿಗೆ ಕಾಣದಂತೆ ಕೆಲಸ ಮಾಡುತ್ತಿದ್ದಾರೆ. ಜಾರಕಿಹೊಳಿ ಸಾಹುಕಾರ್‌  ಅವರು ಬಡವರ ಪಾಲಿಗೆ ನಂದಾದೀಪ ಆಗಿದ್ದಾರೆ.  ನಾವು ಮತ್ತು ನಮ್ಮ ಕುಟುಂಬ ಯಾವಾಗಲೂ ಸಾಹುಕಾರ್‌ ಜೊತೆ ಇರುತ್ತೇವೆ ಎಂದು ಅವರು ತಿಳಿಸಿದರು.
WhatsApp Group Join Now
Telegram Group Join Now
Share This Article