ಕಾಗವಾಡ:ಶ್ರೀ ಮಹರ್ಷಿ ವಾಲ್ಮೀಕಿ ಅವರು ರಾಮಾಮಾಣ ಬರೆಯುವ ಮೂಲಕ ಆದರ್ಶ್ ಪುರುಷ ಶ್ರೀರಾಮನ ಅನಾಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ದಲಿತ ಸೇನೆ ತಾಲ್ಲೂಕಾಧ್ಯಕ್ಷ ಸಚಿನ್ ಕಾಂಬ್ಳೆ ಹೇಳಿದರು.
ಅವರು ಮಂಗಳವಾರ ದಿ.07 ರಂದು ಸಮೀಪದ ಸಪ್ತಸಾಗರ ಗ್ರಾಮ ಪಂಚಾಯತಿಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ,ದೇವ ಮಹರ್ಷಿ ವಾಲ್ಮೀಕಿ ಅವರಿಂದಲೇ ಶ್ರೀ ರಾಮಾಯಣದ ಮೂಲಕ ಶ್ರೀರಾಮನ ಆದರ್ಶ ಏಕ ಪತ್ನಿ ವ್ರತಸ್ಥ,ಮರ್ಯಾದೆ ಪುರುಷೋತ್ತಮ ಹಾಗೂ ಸಹೋದರರ ಬಗ್ಗೆ ಇರುವ ಪ್ರೀತಿ ಪ್ರಸ್ತುತ ಜನಾಂಗಕ್ಕೆ ತೋರಿಸಲು ದಾರಿದೀಪವಾಗಲು ಸಾಧ್ಯವಾಗಿದೆ ಎಂದರು.
ನಂತರ ತಾಪಂ ಸದಸ್ಯ ದಿಲೀಪ ಕಾಂಬ್ಳೆ ಮಾತನಾಡಿ,ಆದಿಕವಿಯಾಗಿದ್ದ ಶ್ರೀ ವಾಲ್ಮೀಕಿಯವರು ಶ್ರೀ ರಾಮನಿಂದ ಮನಃಪರಿವರ್ತನೆಯಾಗಿ ರಾಮಾಯಣದಂಥ ಮೇರುಕೃತಿಯನ್ನು ರಚಿಸಿ ಭಾರತದಾಧ್ಯಂತ ಅಜರಾಮರಾದರು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಬಸವರಾಜ ಹಣಗಂಡಿ,ಸದಸ್ಯರಾದ ರಾವಸಾಬ ಐಗಳಿ,ಶಂಕರ ಕೋಳೆಕರ,ವಿಜಯ ಕಾಂಬಳೆ,ಅಶೋಕ ಪತ್ತಾರ,ವಾಲ್ಮೀಕಿ ಸಮಾಜದ ಮುಖಂಡರಾದ ಧರೆಪ್ಪ ಚುನಾರ,ಸಂಜಯ ಚುನಾರ,ಅಪ್ಪು ಅಂಬಿ,ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ರಾಮಚಂದ್ರ ಕೋಳಿ, ಸತೀಶ ನಾಯಕ,ಸಂತ್ರಾಮ ಕಾಂಬ್ಳೆ,ಸೇರಿದಂತೆ ಅನೇಕರು ಇದ್ದರು.