ಕಲಬುರಗಿ, ಫೆಬ್ರವರಿ 05: ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದರೂ ಜೈಲಿನಲ್ಲೇ ಇದ್ದ ಕೈದಿಗೆ ಜೈಲಾಧಿಕಾರಿಗಳ ಸಹಾಯ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ದುರ್ಗಪ್ಪ ಎಂಬುವರು ಕೊಲೆ ಪ್ರಕರಣದಲ್ಲಿ 2013ರಲ್ಲಿ ಜೈಲು ಸೇರಿದ್ದರು. ಅಲ್ಲದೇ, ದುರ್ಗಪ್ಪ ಮೇಲೆ ಪ್ರಕರಣ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷಕೆಗೆ ಒಳಗಾಗಿದ್ದರು. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದರು.
ಜೈಲಾಧಿಕಾರಿಗಳು ದುರ್ಗಪ್ಪನ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಆದರೆ, ದುರ್ಗಪ್ಪ ಸಂಬಂಧಿಕರು ಕ್ಯಾರೆ ಎನ್ನಲಿಲ್ಲ. ಅಲ್ಲದೇ, ಕೆಲ ಎನ್ಜಿಓಗಳನ್ನು ಸಂರ್ಪಕ ಮಾಡಿದ್ದ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ದುರ್ಗಪ್ಪರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಅದರೂ, ಅಲ್ಲಿಂದಲೂ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.
ದುರ್ಗಪ್ಪ ಜೈಲಿನಲ್ಲಿದ್ದಾಗ ಮಾಡಿದ್ದ ಕೂಲಿ ಕೆಸಲದ ಹಣ ಇರುವುದನ್ನು ಪತ್ತೆ ಹಚ್ಚಿದ್ದರು. ದುರ್ಗಪ್ಪರ ಬ್ಯಾಂಕ್ ಖಾತೆ ಇದಿದ್ದು ಲಿಂಗಂಸೂರಿನಲ್ಲಿ. ಕೊನೆಗೆ ತಮ್ಮ ಸಿಬ್ಬಂದಿಯನ್ನು ದುರ್ಗಪ್ಪರ ಜೊತೆಗೆ ಕಳಹುಸಿ ಹಣ ಡ್ರಾ ಮಾಡಿಸಿಕೊಂಡು ಬರಲು ಅನುವು ಮಾಡಿಕೊಟ್ಟಿದ್ದರು. ಕೊನೆಗೆ ಜೀವಾವಧಿ ಶಿಕ್ಷೆಯ ತೀರ್ಪಿನಲ್ಲಿ ನ್ಯಾಯಾಲಯ ವಿಧಿಸಿದ್ದ ದಂಡದ ಮೊತ್ತ 1 ಲಕ್ಷ ರೂ. ಪಾವತಿ ಮಾಡಿಸಿ. ಕೊನೆಗೆ ಜೈಲಿಗೂ ಮಾನವೀಯ ಮುಖವಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.