ರಷ್ಯಾ-ಉಕ್ರೇನ್‌ ಸಮರದಲ್ಲಿ ದೊಡ್ಡಣ್ಣ ಟ್ರಂಪ್‌ ರಷ್ಯಾ ಪರ ಬೆಂಬಲ

Ravi Talawar
ರಷ್ಯಾ-ಉಕ್ರೇನ್‌ ಸಮರದಲ್ಲಿ ದೊಡ್ಡಣ್ಣ ಟ್ರಂಪ್‌ ರಷ್ಯಾ ಪರ ಬೆಂಬಲ
WhatsApp Group Join Now
Telegram Group Join Now

ವಾಷಿಂಗ್ಟನ್​, ಅಮೆರಿಕ: ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್​ – ರಷ್ಯಾ ಯುದ್ಧದಲ್ಲಿ ಆರಂಭದಿಂದಲೂ ಅಮೆರಿಕ ಉಕ್ರೇನ್​ ಪರ ನಿಂತಿತ್ತು. ಆದರೆ, ಇದೀಗ ನಾಟಕೀಯ ಬೆಳವಣಿಗೆಯಲ್ಲಿ ಅಮೆರಿಕ ವಿಶ್ವಸಂಸ್ಥೆ ನಿರ್ಣಯದಲ್ಲಿ ರಷ್ಯಾದ ಪರ ಹಾಗೂ ನಿರ್ಣಯದ ವಿರುದ್ಧ ಮತ ಹಾಕುವ ಮೂಲಕ ಗಮನ ಸೆಳೆದಿದೆ. ರಷ್ಯಾದ ಜೊತೆ ನೇರ ಮಾತುಕತೆ ಮೂಲಕ ಯುದ್ಧವನ್ನು ಕೊನೆಗಾಣಿಸಲು ಮುಂದಾಗಿರುವ ಟ್ರಂಪ್​, ಕಳೆದ ವಾರ ನಡೆದ ಪ್ರಾಥಮಿಕ ಮಾತುಕತೆಯಲ್ಲಿ ಉಕ್ರೇನ್​​ ಮತ್ತು ಯುರೋಪಿಯನ್​ ರಾಷ್ಟ್ರಗಳ ಬೆಂಬಲವನ್ನು ಹೊರಗೆ ಇಟ್ಟು ಚರ್ಚೆ ನಡೆಸಿದ್ದರು.

ವಿಶ್ವಸಂಸ್ಥೆ ನಿರ್ಣಯ ಅಂಗೀಕಾರ: 193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯಸಭೆಯು ಉಕ್ರೇನ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಮಂಡಿಸಿದ ನಿರ್ಣಯದ ಮೇಲೆ ಮತ ಚಲಾಯಿಸಿದವು. “ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸಬೇಕು ” ಎಂಬ ಕರಡು ನಿರ್ಣಯ ಕೈಗೊಳ್ಳಲಾಗಿತ್ತು

ನಿರ್ಣಯದ ವಿಷಯ ಏನು?: ಈ ನಿರ್ಣಯವು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಾಗರಿಕ ಸಮಾಜ ಒಳಗೊಂಡಂತೆ ಅಗಾಧವಾದ ವಿನಾಶ ಮತ್ತು ಮಾನವ ಸಂಕಟದಿಂದ ಗುರುತಿಸಲ್ಪಟ್ಟಿರುವ ಉಕ್ರೇನ್ ವಿರುದ್ಧದ ಯುದ್ಧದ ಆರಂಭಿಕ ನಿಲುಗಡೆ ಮತ್ತು ಶಾಂತಿ ಕಾಪಾಡಬೇಕು ಎಂಬ ನಿರ್ಣಯಕ್ಕೆ ಕರೆ ನೀಡಿದೆ.

WhatsApp Group Join Now
Telegram Group Join Now
Share This Article