ಮಹಾಲಿಂಗಪುರ: ಜೀವನವೊಂದು ಸುಗ್ಗಿ ಇದ್ದಂತೆ ವಿದ್ಯಾರ್ಥಿಗಳು ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿ ವಿಜಯದ ಹುಗ್ಗಿ ಸವಿಯಿರಿ ಎಂದು ರನ್ನಬೆಳಗಲಿಯ ಸಿದ್ದಾರೂಢ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಕಂಬಾರ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾತ್ವಿಕ ಆಹಾರ ಮತ್ತು ವಿಚಾರಗಳಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ದಿಸಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸಕಾರಾತ್ಮಕ ಸಾಫಲ್ಯ ದೊರೆಯುತ್ತದೆ ಎಂದರು. ಪ್ರಸಕ್ತ ಸಾಲಿನ ಒಕ್ಕೂಟದ ಅಧ್ಯಕ್ಷ ಎಂ.ಬಿ.ತೇಲ್ಕರ ಪ್ರಾಸ್ತಾವಿಕ ಮಾತನಾಡಿ ಆಡು ಮುಟ್ಟದ ಎಲೆಯಿಲ್ಲ, ಕೆಎಲ್‌ಇ ಪರಿಚಯಿಸದ ಕೋರ್ಸ್ ಇಲ್ಲ ಎಂದರು. ಪ್ರಾಚಾರ್ಯ ಎಲ್.ಬಿ.ತುಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಸ್ಕಾರ, ವಿನಯ, ವಿಧ್ಯೇಯತೆಯಿಂದ ಕಲಿತು ಉತ್ತಮ ನಾಗರಿಕರಾಗಬೇಕು ಎಂದರು.
ಕಳೆದ ಸಾಲಿನಲ್ಲಿ ಶೇ.೯೦ಕ್ಕೂ ಹೆಚ್ಚು ಅಂಕ ಗಳಿಸಿದ ೧೯ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರತಿ ವರ್ಷದಂತೆ ಪ್ರಾಚಾರ್ಯ ಎಲ್.ಬಿ.ತುಪ್ಪದ ವಿಜ್ಞಾನ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಒಟ್ಟಾರೆ ೧೫೦೦/- ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಇದಕ್ಕೂ ಪೂರ್ವದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳ ತಲೆ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ವೇದಿಕೆ ಮೇಲೂ ಗುಲಾಬಿ ನೀಡಿ ಸ್ವಾಗತಿಸಲಾಯಿತು.
ಕಳೆದ ಸಾಲಿನ ಒಕ್ಕೂಟದ ಅಧ್ಯಕ್ಷ ಶಿವಲಿಂಗ ಸಿದ್ನಾಳ ಅವರು ನೂತನ ಅಧ್ಯಕ್ಷರಿಗೆ ಜವಾಬ್ದಾರಿಯ ಹೊತ್ತಿಗೆಯನ್ನು ಹಸ್ತಾಂತರಗೊಳಿಸಿದರು. ನಂತರ ಎಲ್ಲರೂ ಬೂಂದಿ, ಮಸಾಲೆ ರೈಸ್ ಭೋಜನ ಸವಿದರು. ರಂಗುರಂಗಿನ ಬಟ್ಟೆಗಳಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಪ್ರಾಚಾರ್ಯ ಎಲ್.ಬಿ.ತುಪ್ಪದ, ಉಪಪ್ರಾಂಶುಪಾಲ ಬಿ.ಜಿ.ಖೋತ, ಒಕ್ಕೂಟದ ಅಧ್ಯಕ್ಷ ಎಂ.ಬಿ.ತೇಲ್ಕರ, ಆರ್.ಎನ್.ಪಟ್ಟಣಶೆಟ್ಟಿ, ಜಿ.ಬಿ.ಜತ್ತಿ, ಜಿ.ವೈ.ಕಿತ್ತೂರ, ಎಸ್.ಎಚ್.ಮೆಳವಂಕಿ, ಸಾಂಸ್ಕೃತಿಕ ವಿಭಾಗದ ಆರ್.ಎಸ್.ಕಲ್ಲೋಳ್ಳಿ, ಎ.ಆರ್. ಬಿಪಾಟೀಲ, ಜೆ.ಪಿ.ಪೂಜೇರಿ, ಕ್ರೀಡಾ ವಿಭಾಗದ ಬಿ.ಎಂ.ಸಿದ್ನಾಳ, ಬಿ.ಬಿ.ಯಲ್ಲಟ್ಟಿ, ಬಿ.ಎನ್.ಹಂದಿಗುಂದ, ಆರ್.ಎಂ ಕಂಬಾರ, ಎಸ್.ಎಸ್.ಪೂಜೇರಿ, ಪಿ.ಎಂ.ಬಸವರಾಜ, ಬಿ.ಆರ್.ಮೂಶಪ್ಪಗೋಳ, ಎಸ್.ಎ.ಚೌಗಲಾ, ಟಿ.ವಿ.ಜಮಾದಾರ, ಸಿ.ಎಂ.ಮಠಪತಿ, ಡಿ.ಎಸ್.ಬಡಿಗೇರ, ಆನಂದ ಅಂಗಡಿ, ಮಾನಂದಾ ಚೌಗಲಾ, ಸಾಕ್ಷಿ ಹುಲಕುಂದ ಇದ್ದರು.
ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿ ಸವಿಯಿರಿ ವಿಜಯದ ಹುಗ್ಗಿ
