ರೂಪೇಶ್ ಶೆಟ್ಟಿ ಚಿತ್ರ  ಅಧಿಪತ್ರ ಭಾರೀ‌ ಮೊತ್ತಕ್ಕೆ ಆಡಿಯೋರೈಟ್ಸ್ ಮಾರಾಟ

Ravi Talawar
ರೂಪೇಶ್ ಶೆಟ್ಟಿ ಚಿತ್ರ  ಅಧಿಪತ್ರ ಭಾರೀ‌ ಮೊತ್ತಕ್ಕೆ ಆಡಿಯೋರೈಟ್ಸ್ ಮಾರಾಟ
WhatsApp Group Join Now
Telegram Group Join Now
     ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ‌ ಬಹು ನಿರೀಕ್ಷಿತ ಸಿನಿಮಾ ‘ಅಧಿಪತ್ರ’. ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಆಡಿಯೋ ಹಕ್ಕು ಪ್ರತಿಷ್ಠಿತ ಆಡಿಯೋ‌ ಸಂಸ್ಥೆ ಲಹರಿ ಖರೀದಿ ಮಾಡಿದೆ.
     ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್ನಿಂದಲೂ ಎಲ್ಲರ ಗಮನ ಸೆಳದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ಅಧಿಪತ್ರದ ಮೊದಲ ಝಲಕ್ ಹೊರಬೀಳಲಿದೆ.
      ಆಡ್ ಇಂಡಸ್ಟ್ರಿ ನಲ್ಲಿ ಕ್ರಿಯೇಟಿವ್ ಆಡ್ಸ್ ಮೂಲಕ ಗಮನ ಸೆಳೆದಿದ್ದ ಚಯನ್ ಶೆಟ್ಟಿ ಈಗ ಅಧಿಪತ್ರ ಆಕ್ಷನ್  ಕಟ್ ಹೇಳಿದ್ದಾರೆ , ರೂಪೇಶ್ ಗೆ ಜೋಡಿಯಾಗಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಸಾಥ್ ಕೊಟ್ಟಿದ್ದಾರೆ. ಕಾಂತಾರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ಎಂಕೆ‌ ಮಠ, ದೀಪಕ್ ರೈ, ಅನಿಲ್ ಉಪ್ಪಾಲ್, ಕಾರ್ತಿಕ್ ಭಟ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ.
     ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಅಧಿಪತ್ರ ಸಿನಿಮಾವನ್ನು ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್,  ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‌ಬಂಡವಾಳ ಹೂಡಿದ್ದು, ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ.
WhatsApp Group Join Now
Telegram Group Join Now
Share This Article