ಅನುಷ್ಠಾನ ಅಧಿಕಾರಿಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರೂಪಾಗೆ ಸನ್ಮಾನ

Ravi Talawar
ಅನುಷ್ಠಾನ ಅಧಿಕಾರಿಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರೂಪಾಗೆ ಸನ್ಮಾನ
WhatsApp Group Join Now
Telegram Group Join Now
ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಅನುಷ್ಠಾನ ಅಧಿಕಾರಿಗಳಾದ ಎಲ್ಲಾ ಸಿ.ಆರ್.ಪಿ. ಮತ್ತು ಬಿ.ಆರ್.ಪಿ.ಗಳು, ಅನಗೋಳ ಸಮೂಹ ಸಂಪನ್ಮೂಲ ಕೇಂದ್ರದ ಸಿ.ಆರ್.ಪಿ.ಗಳಾದ ಶ್ರೀ ಸಿದ್ದು ನೇಸರಗಿ ಅವರ ನೇತೃತ್ವದಲ್ಲಿ, 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಕು. ರೂಪಾ ಚನ್ನಗೌಡ ಪಾಟೀಲ ಇವಳಿಗೆ ಸನ್ಮಾನ ಮಾಡಿ, ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಗಾಂಧೀ ಮರೆಣ್ಣವರ ಅವರನ್ನು ಎಲ್ಲಾ ಶಿಕ್ಷಕರ ಪರವಾಗಿ ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಲಾಯಿತು. ವಿದ್ಯಾರ್ಥಿನಿಗೆ ಎಲ್ಲರೂ ಶುಭ ಹಾರೈಸಿ, ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ಉತ್ತಮ ಅಂಕಗಳನ್ನು ಪಡೆದು ದೇವಲಾಪುರ ಗ್ರಾಮ ಮತ್ತು ಬೈಲಹೊಂಗಲದ ಹೆಸರನ್ನು ಹೆಚ್ಚಿಸಬೇಕೆಂದು ಸಿ.ಆರ್.ಪಿ. ಸಿದ್ದು ನೇಸರಗಿ ಅವರು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಗೌಡಪ್ಪ ಪಾಟೀಲ, ರವಿ ತುರಮರಿ, ಶ್ರೀಶೈಲ ಹಿರೇಮಠ, ಮಾಲತೇಶ ಜಕಲಿ, ಅನಂತ ಮರೆಣ್ಣವರ, ಶ್ರೀಮತಿ ಸವಿತಾ ಹಿರೇಮಠ, ಶ್ರೀ ಬಸವರಾಜ್ ಗುರಕನವರ, ಶ್ರೀ ಎಸ್.ಎಸ್. ಶಿವನಾಯ್ಕರ ಹಾಗೂ ಹಿಂದಿನ ಬಿ.ಆರ್.ಪಿ. ಅಜ್ಜಪ್ಪ ಅಂಗಡಿ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿನಿಗೆ ಶುಭ ಹಾರೈಸಿದರು.
ಮುಂದಿನ ವಿದ್ಯಾಭ್ಯಾಸಕ್ಕಾಗಿ, ವಿಶೇಷವಾಗಿ ಎಂ.ಬಿ.ಬಿ.ಎಸ್. ಮಾಡಲು ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು.
WhatsApp Group Join Now
Telegram Group Join Now
Share This Article