ರನ್ನ ಬೆಳಗಲಿ: ಮಾ.೦೩.,ಪಟ್ಟಣ ಪಂಚಾಯತ ಕಾರ್ಯಾಲಯದ ಅಂಗಳದಲ್ಲಿ ವಿಕಲಚೇತನರಿಗೆ ಸೋಲಾರ್ ದೀಪಗಳನ್ನು ಮತ್ತು ಪೌರಕಾರ್ಮಿಕರಿಗೆ ಸುರಕ್ಷಿತಾ ಕಿಟ್ ವಿತರಣೆ ಜರುಗಿತು.
ರೂಪಾ ಸದಾಶಿವ ಹೊಸಟ್ಟಿ ಪ.ಪಂ ಅಧ್ಯಕ್ಷರು ಫಲಾನುಭವಿ ಸಲಕರಣೆಗಳ ವಿತರಣೆಗೆ ಚಾಲನೆ ನೀಡಿ, ಸರ್ಕಾರ ನೀಡಿದ ವಸ್ತುಗಳನ್ನು ಸಮರ್ಪಕವಾಗಿ ಉಪಯೋಗಿಸಬೇಕು. ಪೌರಕಾರ್ಮಿಕರಿಗೆ ಒದಗಿಸಲಾದ ಸುರಕ್ಷಿತಾ ಕಿಟ್ ಬಹುಪಯೋಗದ ವಸ್ತುಗಳಾಗಿವೆ,ಆರೋಗ್ಯ ದೃಷ್ಟಿಯಿಂದ ತಮ್ಮ ಸುರಕ್ಷತೆಗಾಗಿ ನಿತ್ಯವೂ ಅದರ ಬಳಕೆ ಆಗಬೇಕು.ನಿಮ್ಮ ಆರೋಗ್ಯವೇ ನಮ್ಮ ಪಟ್ಟಣದ ಆರೋಗ್ಯವಾಗಿದೆ. ನರ್ಮಲ್ಯದ ರೂವಾರಿಗಳೇ ತಾವಾಗಿದ್ದೀರಿ ಎಂದು ತಿಳಿಸಿದರು.
ಸ್ಥಾಯಿ ಸಮಿತಿ ಚೆರ್ಮನ್ನರಾದ ಪ್ರವೀಣ ಬರಮನಿ,ಮುಖ್ಯಾಧಿಕಾರಿ ಈರಣ್ಣ ದಡ್ಡಿ,ಸಿದ್ದುಗೌಡ ಪಾಟೀಲ,ಪ್ರವೀಣ ಪಾಟೀಲ,ಸಾವಿತ್ರಿ ರಾಮದುರ್ಗ,ಭೀಮಪ್ಪ ಹೊಸಮನಿ,ಕರೆಪ್ಪ ಕುಂಬಾಳಿ, ಕಾಶವ್ವ ಪುರಾಣಿಕ,ಮುಬಾರಕ ಅತ್ತಾರ,ರೇಣುಕಾ ಬಾಗಲಿ,ಮುತ್ತಪ್ಪ ಸನ್ನಟ್ಟಿ,ಸದಾಶಿವ
ಹೊಸಟ್ಟಿ,ಸಂಗಪ್ಪ ಅಮಾತಿ,ಈರಪ್ಪ ಕಿತ್ತೂರ,ಸಿದ್ದು ಸಾಂಗ್ಲಿಕರ,ಬಸಪ್ಪ ಗೌರಣ್ಣವರ, ಸಿದ್ದು ದೊಡಟ್ಟಿ ಜೊತೆಗೂಡಿ ಫಲಾನುಭವಿ ವಿಕಲಚೇತನರಾದ ರಾಗಿಣಿ ಹನಗಂಡಿ,ಸುಮಿತ್ರಾ ಹಳ್ಳೂರ, ಮಹಾಲಿಂಗ ಬಂದಕ್ಕನ್ನವರ, ಚಂದ್ರಕಾಂತ ಗರಗದ, ಯಲ್ಲಪ್ಪ ಲಾಲಿಬುಡ್ಡಿ,ಶಂಕ್ರವ್ವ ಹೆಗ್ಗನ್ನವರ ರವರಿಗೆ ಸೋಲಾರ ದೀಪಗಳನ್ನು ಮತ್ತು ಎಲ್ಲಾ ಪೌರ ಕಾರ್ಮಿಕರಿಗೆ ಸುರಕ್ಷಿತ ಕಿಟ್‌ಗಳನ್ನು ವಿತರಿಸಿದರು.
ಬಾಬು ಜಕಾತಿ,ಉಮಾಶ್ರೀ ನೇಕಾರ,ಮಹಾಲಿಂಗಪ್ಪ ಸಮೇರ,ರಾಜು ಮುಗಳಖೋಡ,ಸತ್ಯಪ್ಪ ಹನಗಂಡಿ,ಶಿವು ಸುನ್ನಾಳ ಪ,ಪಂ ಸಿಬ್ಬಂದಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


