ರನ್ನ ಬೆಳಗಲಿ:ಅ.೦೬., ಪಟ್ಟಣದ ಶ್ರೀ ಮಾರುತಿ ದೇವರ ಶಹನಾಯಿ ಕಲಾ ಸಂಘ ರನ್ನ ಬೆಳಗಲಿ ಕಲಾವಿದರು ಮೈಸೂರು ದಸರಾ ೨೦೨೫ರ ಮೆರವಣಿಗೆಯಲ್ಲಿ ಕ್ರಮ ಸಂಖ್ಯೆ ೧೫ ಶಹನಾಯಿ ವಾದನ ಕಲಾಪ್ರಕಾರದಲ್ಲಿ ಸೇವೆ ಸಲ್ಲಿಸಿ ರಾಜ್ಯ ಪುರಸ್ಕಾರ ಗೌರವನ್ನು ಸ್ವೀಕರಿಸಿದ್ದಾರೆ. ಕಲಾ ಸಂಘದ ಅಧ್ಯಕ್ಷ ಲಕ್ಕಪ್ಪ ಭಜಂತ್ರಿ, ಸದಸ್ಯರಾದ ಹಣಮಂತ ಭಜಂತ್ರಿ, ಮಾರುತಿ ಭಜಂತ್ರಿ, ಹಣಮಂತ ಪೂಜೇರಿ, ಬಾಬು ಭಜಂತ್ರಿ, ರಮೇಶ ಭಜಂತ್ರಿ, ಸಂಜು ಭಜಂತ್ರಿ, ಮಲ್ಲಪ್ಪ ಭಜಂತ್ರಿ, ಕಂಡು ಭಜಂತ್ರಿ, ಮಾರುತಿ ಹ ಭಜಂತ್ರಿ, ಸದಾಶಿವ ಭಜಂತ್ರಿ, ಅರ್ಜುನ ಭಜಂತ್ರಿ, ಯಮನಪ್ಪ ಭಜಂತ್ರಿ, ಯಮನಪ್ಪ ಹೊಳೆಪ್ಪಗೋಳ ಮತ್ತು ವಸಂತ ಬಟಾಟೆಪ್ಪಗೋಳ ಭಾಗವಹಿಸಿದ್ದರು.


