ರಾಜ್ಯ ಸರ್ಕಾರದ ಆದೇಶ ದಂತೆ ಮನೆ-ಮನೆಗೆ ಪೊಲೀಸ್ ಎಂಬ ಹೊಸ ಕಾರ್ಯಕ್ರಮಕ್ಕೆ ಬುಧವಾರ ಡಿವೈಎಸ್‌ಪಿ ರೋಷನ್‌ಜಮೀರ ಚಾಲನೆ ನೀಡಿದರು. ಸಾರ್ವಜನಿಕರ ಸುರಕ್ಷತೆಗಾಗಿ ರಾಜ್ಯಸರ್ಕಾರ ವಿನೂತನ ಉಪಕ್ರಮವನ್ನು ಜಾರಿ ಗೊಳಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು, ತಮ್ಮಪ್ರದೇಶಗಳಲ್ಲಿ ತೊಂದರೆಗಳನ್ನು ಮನೆಗೆ ಭೇಟಿ ನೀಡುವ ಪೊಲೀಸ್ ತಂಡಕ್ಕೆ ನೀಡಬೇಕು, ಹೆಚ್ಚುತ್ತಿರುವ ಸೈಬರ ಅಪರಾಧಗಳು, ಮಾದಕ ವಸ್ತುಗಳ ಬಳಕೆ ಅಥವಾ ವಿಲೇವಾರಿ, ಬಾಲ್ಯವಿವಾಹ, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಸುದ್ದಿಗಳ ಸತ್ಯಾ ಸತ್ಯತೆ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವದು ಮುಂತಾದ ಕ್ರಮಗಳನ್ನು ಇಲಾಖೆ ಜಾರಿಗೊಳಿಸಲು ಸಹಕಾರ ನೀಡಬೇಕು ಎಂದು ಹೇಳಿದರು. ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೊಳಿಸುವದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಾಸಿಸುವ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು ಆದಷ್ಟು ಅಪರಾಧಗಳನ್ನು ತಡೆಗಟ್ಟುವಲ್ಲಿ ಇಲಾಖೆಯೊಂದಿಗೆ ಸಹಕರಿಸಬೇಕು, ಮಹಿಳೆಯರಿಗೆ ತೊಂದರೆಗಳಿದ್ದರೇ ಮನೆಗೆ ಬರುವ ಸಿಬ್ಬಂದಿಯ ಎದುರು ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಇಲಾಖೆಯಲ್ಲಿ ಕೆಲಸದ ವಿಳಂಬ ವಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಸಂಚಾರ ನಡೆದಿದ್ದರೆ, ಎಲ್ಲ ಮಾಹಿತಿಗಳನ್ನು ಮುಕ್ತವಾಗಿ ಹೇಳಲು ಅವಕಾಶ ವಿದೆ. ಇದರಿಂದ ಸಮಸ್ಯೆಯ ಪರಿಹಾರ ವಾಗಲಿದೆ ಎಂದು ಹೇಳಿದರು. ನಗರಠಾಣೆ ಪಿಎಸ್‌ಐ ಅನೀಲ ಕುಂಬಾರ ಮಾತನಾಡಿ ತಮ್ಮ ಮನೆಗಳಿಗೆ ಭೇಟಿ ನೀಡುವ ಪೊಲೀಸರಿಗೆ ಎಲ್ಲ ಸಮಸ್ಯೆಗಳನ್ನು ಹೇಳಿ ಕೊಳ್ಳುವ ಅವಕಾಶ ವಿದೆ. ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರುವದು, ಸಮಾದಲ್ಲಿ ಅಪರಾಧಗಳನ್ನು ತಡೆಗಟ್ಟಿ, ಶಾಂತಿ ಸೂವ್ಯವಸ್ಥೆಯನ್ನು ಕಾಪಾಡಲು ಈ ಯೋಜನೆಯು ಉಪಯುಕ್ತವಾಗಲಿದೆ ಎಂದು ಹೇಳಿದರು. ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಪ್ರಭಾತ ನಗರದ ಕೃಷ್ಣ ಕಾವಿ, ತೇಲಿ, ವರ್ಧಮಾನ ಯಲಗುದ್ರಿ ವೇದಿಕೆಯಲ್ಲಿದ್ದರು. ಪ್ರಭಾತ ನಗರ ಪ್ರದೇಶದಲ್ಲಿ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮ ನಡೆಯಿತು.