ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ 

Ravi Talawar
ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ 
WhatsApp Group Join Now
Telegram Group Join Now
 ಧಾರವಾಡ:  ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರದ ಮತ ಕಳ್ಳತನ ವಿರುದ್ದ “ಸಹಿ ಸಂಗ್ರಹ ಅಭಿಯಾನ “ಇಂದು ಧಾರವಾಡ ವಿವೇಕಾನಂದ ವೃತ್ತದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೌರಮ್ಮಾ ಬಲೋಗಿ ಅವರಿಂದ. ನಮ್ಮ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಸಂತೋಷ ಲಾಡ್ ಜೀ ರವರ ಮಾರ್ಗದರ್ಶನದಲ್ಲಿ ನಮ್ಮ ಧಾರವಾಡ ಜಿಲ್ಲೆಯಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಅಭಿಯಾನದಲ್ಲಿ ನಮ್ಮ ಡಿಸಿಸಿ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ್, ನಮ್ಮ ಗ್ರಾಮೀಣ ಅಧ್ಯಕ್ಷರಾದ  ಅನಿಲಕುಮಾರ ಪಾಟೀಲ್, ನಮ್ಮ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಸದಾನಂದ ಡಂಗನವರ್, ನಮ್ಮ ಮಾಜಿ ಶಾಸಕ ಎಂ ಎಸ್ ಅಕ್ಕಿ,  ದೀಪಕ ಚಿಂಚೋರೆ, ನಮ್ಮ ಮಹಿಳಾ ಕಾಂಗ್ರೆಸ್ಎಲ್ಲಾ ಬ್ಲಾಕ್ ಅಧ್ಯಕ್ಷರು, ವಿರೋಧ ಪಕ್ಷದ ನಾಯಕ  ಇಮ್ರಾನ್ ಯಲಿಗಾರ್, ಕೆಪಿಸಿಸಿ ಕಾರ್ಯದರ್ಶಿ. ರಾಜು ಕಮಟಿ, ಬಸವರಾಜ ಜಾಧವ, ಪ್ರಕಾಶ ಹಳಿಯಾಳ, ಪ್ರಕಾಶ ಘಾಟಗೆ, ಸಲ್ಮಾನ್ ಪಟೇಲ್, ಖಾಜಾಸಾಬ್ ದೊಡ್ಮನಿ ಸೇರಿದಂತೆ ಎಲ್ಲಾ ಹಿರಿಯ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article