ಬಳ್ಳಾರಿ, ಏ.06..: ನಗರದಲ್ಲಿ ಇಂದು “ರನ್ ಫಾರ್ ಜೀಸಸ್” ಆಧ್ಯಾತ್ಮಿಕ ಓಟವನ್ನು ಹಮ್ಮಿಕೊಳ್ಳಲಾಗಿತ್ತ ಕೇವಲ ಓಟವಾಗದೆ ಭಕ್ತಿ, ಏಕತೆ ಮತ್ತು ಶಾಂತಿಯ ಸಂಕೇತವಾಗಿತ್ತು. ಕ್ರೈಸ್ತ ಸಮುದಾಯದ ಜನತೆ ಇದರಲ್ಲಿ ಪಾಲ್ಗೊಂಡಿದ್ದರು. ಫಾದರ್ ಇವಾನ್ ಪಿಂಟೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ. ರವಿ ಜೋಸೆಫ್ ಧ್ವಜಾರೋಹಣ ಮಾಡಿ ಓಟವನ್ನು ಆರಂಭಿಸಿದರು.
ಯೇಸು ಕ್ರಿಸ್ತನ ಪ್ರೀತಿ, ಶಾಂತಿ ಮತ್ತು ಪುನರುತ್ಥಾನದ ಸಂದೇಶವನ್ನು ಸಾರುತ್ತಾ ನಡೆದ ಈ ಓಟದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಪಾಲ್ಗೊಂಡು “ಯೇಸು ಜೀವಿಸಿದ್ದಾನೆ” ಎಂಬ ಘೋಷಣೆಗಳನ್ನು ಕೂಗಿದರು.
ಪ್ರತಿ ವರ್ಷವೂ ಗುಡ್ ಫ್ರೈಡೇ ಮತ್ತು ಈಸ್ಟರ್ ನಡುವಿನ ಅವಧಿಯಲ್ಲಿ ಈ ಓಟ ನಡೆಯುತ್ತದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸಾಮೂಹಿಕ ಪ್ರಾರ್ಥನಾ ಸಭೆಯೊಂದಿಗೆ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ಧರ್ಮಗುರುಗಳು ಯೇಸು ಕ್ರಿಸ್ತನ ತ್ಯಾಗ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳ ಕುರಿತು ಸಂದೇಶ ನೀಡಿದರು.


