ಆರ್‌ಎಸ್‌ಎಸ್ ಬಿಜೆಪಿಯ ಅಂಗ: ನಂಜಯ್ಯನಮಠ

Ravi Talawar
ಆರ್‌ಎಸ್‌ಎಸ್ ಬಿಜೆಪಿಯ ಅಂಗ: ನಂಜಯ್ಯನಮಠ
oplus_1026
WhatsApp Group Join Now
Telegram Group Join Now
ಹಸಿರು ಕ್ರಾಂತಿ ವರದಿ, ಜಮಖಂಡಿ: ಆರ್‌ಎಸ್‌ಎಸ್ ಬಿಜೆಪಿಯ ಒಂದು ಅಂಗ ಎಂಬುದು ಇಡಿ ಜಗತ್ತಿಗೆ ಗೊತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ನಗರದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ನಿವಾಸದ ಆವರಣದಲ್ಲಿ ಮತ ಕಳ್ಳತನ ನಿಲ್ಲಿಸಿ, ಜನಾದೇಶ ಕಗ್ಗೋಲೆ ನಿಲ್ಲಿಸಿ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಸಹಿ ಮಾಡುವದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಸುದ್ದಿಗಾರರ ಜೋತೆ ಮಾತನಾಡಿದರು.
ಆರ್‌ಎಸ್‌ಎಸ್ ಸೂಚನೆ, ಭಾಗವತರ ಸೂಚನೆಯನ್ನೆ ಬಿಜೆಪಿ ಪರಿಪಾಲನೆ ಮಾಡಿಕೊಳ್ಳುತ್ತಾ ಬರುತ್ತಿದೆ, ಬಿಜೆಪಿಯವರು ಜಾತ್ಯಾತಿತ ನಿಲುವನ್ನು ತೆಗೆದುಕೊಂಡರೆ ಆರ್‌ಎಸ್‌ಎಸ್‌ನವರಿಗೆ ಆಗಿಬರಲ್ಲ, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ದವೂ ಅಸಮಾಧಾನ ಗೊಂಡಿದ್ದರು ಎಂದರು.
ಭೀಮ ಸಂಚಲನ, ಬಸವ ಸಂಚಲನ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಚಿವ ಪ್ರಿಯಾಂಕ ಖರ್ಗೆ ಅವರು ಕೇಳಿದ ಪ್ರಶ್ನೆಗಳಿಗೆ ಆರ್‌ಎಸ್‌ಎಸ್‌ನವರು ಯಾಕೆ ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಹೊರಡಿಸಿದ ಪೂರ್ವಾನುಮತಿ ಪಡೆಯಬೇಕೆಂಬ ಆದೇಶವನ್ನೆ ನಮ್ಮ ಸರ್ಕಾರ ಜಾರಿಗೆ ತಂದಿದೆ, ಸರ್ಕಾರಿ ಜಾಗೆ ಬಳಕೆಗೆ ಎಲ್ಲರಿಗೂ ಅನ್ವಯವಾಗುವಂತೆ ಮಾಡಿದ್ದಾರೆ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಇದ್ದರೂ ಪರವಾಣಿಗೆ ಪಡೆದುಕೊಳ್ಳಬೇಕು ಆರ್‌ಎಸ್‌ಎಸ್‌ಗೆ ಅಷ್ಟೆ ಈ ಆದೇಶವಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಮಜ್ದುರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೌಫಿಕ ಪಾರ್ಥನಳ್ಳಿ, ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಮಹಾದೇವ ಪಾಟೀಲ, ಮಹೇಶ ಕೋಳಿ, ರವಿ ಯಡಹಳ್ಳಿ ಇತರರು ಇದ್ದರು.
WhatsApp Group Join Now
Telegram Group Join Now
Share This Article