ಗದಗ : ಪ್ರತಿ ಮಗು ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಶುದ್ಧವಾದ ಬರವಣಿಗೆ ಅರ್ಥಪೂರ್ಣ ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಗಲು, ಶಿಕ್ಷಕರು ಪಾಠದ ಉದ್ದೇಶವನ್ನರಿತುಕೊಂಡು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಬೋಧನಾ -ಕಲಿಕೋಪಕರಣಗಳನ್ನು ಬಳಸಿಕೊಂಡು ಮಗುವಿನ ಭಾಗವಹಿಸಿಕೆಯೊಂದಿಗೆ ಅರ್ಥಪೂರ್ಣ ಕಲಿಕೆಯಾಗಲು ಬೆಂಬಲಿತ ವ್ಯವಸ್ಥೆಯಾದ ಮೇಲ್ವಿಚಾರಣೆ ಅಧಿಕಾರಿಗಳು ತಂಡವಾಗಿ ಶಿಕ್ಷಕರಿಗೆ ಸೂಕ್ತ ಬೆಂಬಲವನ್ನು ನೀಡಬೇಕು, ಶೈಕ್ಷಣಿಕ ವರ್ಷದ ಇನ್ನುಳಿದ ಅವದಿ ಹಾಗೂ ನವಂಬರ್ ತಿಂಗಳಲ್ಲಿ ಶಾಲೆ ಬಿಟ್ಟ ಮಕ್ಕಳು ಮುಖ್ಯವಾಹಿನಿಗೆ ಬರುವಂತೆ, ಎಲ್ಲಾ ವಿದ್ಯಾರ್ಥಿಗಳು ಶುದ್ಧವಾದ ಬರವಣಿಗೆ ಹೊಂದುವಂತೆ ಜೊತೆಗೆ ಸ್ವರಭಾರಯುಕ್ತವಾಗಿ ಓದುವಂತೆ ಆಯಾ ವಿಷಯಗಳ ಮೂಲ ಕ್ರಿಯೆಗಳು ಗಳಿಸುವಂತೆ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಬೆಂಬಲ ನೀಡಲು ನಾವೆಲ್ಲ ತಂಡವಾಗಿ ಕೆಲಸ ನಿರ್ವಹಿಸೋಣ.
ಹಳೆ ವಿದ್ಯಾರ್ಥಿಗಳು,ಎಸ್ ಡಿ ಎಂ ಸಿ ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಗದಗ ಜಿಲ್ಲೆಯ ಗುಣಾತ್ಮಕ ಫಲಿತಾಂಶವನ್ನು ಹೆಚ್ಚಿಸಿ ಪರಿಸ್ಥಿತಿಗೆ ತಕ್ಕಂತೆ ಇನ್ನಷ್ಟು ಧನಾತ್ಮಕವಾಗಿ ಬದಲಾಗೋಣ, ಹಾಗೂ ನಮ್ಮೆಲ್ಲರ ಸಮಯ ಹಾಗೂ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕಂಕಣ ಬದ್ಧರಾಗೋಣ ಎಂದು ಶಾಲಾ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾದ ಶ್ರೀ ಆರ್ ಎಸ್ ಬುರಡಿ ಹೇಳಿದರು. ಅವರು ಇಂದು ನಡೆದ *ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಮಾರ್ಗದರ್ಶನ, ಮೇಲ್ವಿಚಾರಣಾ ಅಧಿಕಾರಿಗಳ ಪ್ರಗತಿ ಪರಿಶೀಲನೆ ಹಾಗೂ ಶೈಕ್ಷಣಿಕ ಕಾರ್ಯಾಗಾರ* ಉದ್ಘಾಟಿಸಿ ಮಾತನಾಡಿದರು.
ಡಯಟ್ ಪ್ರಾಂಶುಪಾಲರದ ಶ್ರೀ ಜಿ ಎಲ್ ಬಾರಾಟಕ್ಕೆ ಶಾಲಾ ಶಿಕ್ಷಣದ ದೃಷ್ಟಿಕೋನದಲ್ಲಿ-ಹೊಸ ಶೈಕ್ಷಣಿಕ ರಚನೆ, ಪ್ರಮುಖ ಆವಿಷ್ಕಾರಗಳು, ಪಠ್ಯಕ್ರಮ ಇನ್ನು ಹಲವಾರು ಬದಲಾವಣೆಗಳು ಆಗುತ್ತಿವೆ, ಅದರಂತೆ ನಾವು ಸಹಿತ ಪುನಶ್ಚೇತನಗೊಂಡು ಗುಣಮಟ್ಟ ಶಿಕ್ಷಣಕ್ಕಾಗಿ ಬದ್ದರಾಗೋಣ ಜೊತೆಗೆ ಇಲಾಖೆ ಜಾರಿಗೊಳಿಸಿದೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಟ್ಯೂಷನ್ ಹೇಳಿಕೊಡುವ ಯೋಜನೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಒಂದೊಂದು ತಾಸು ಹೆಚ್ಚುವರಿಯಾಗಿ ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಆ ವಿಷಯದಲ್ಲಿ ನಡೆಯುವ ವಿಶೇಷ ತರಗತಿಗಳಿಗೆ ಕಳಿಸುವ ಜವಾಬ್ದಾರಿ ಕುರಿತು ತಿಳಿಸಿದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿ ವಿ ನಡುವಿನಮನಿಯವರು 6 ರಿಂದ 14 ವರ್ಷದ ಮಕ್ಕಳು 8 ವರ್ಷದ ಶಿಕ್ಷಣ (education) ಪಡೆಯುವುದು ಕಡ್ಡಾಯ. ಶಿಕ್ಷಣ ಹಕ್ಕು ಕಾಯಿದೆಯ ಮುಖ್ಯ ಉದ್ದೇಶಗಳು ಭಾರತದಲ್ಲಿನ ಪ್ರತಿಯೊಂದು ಮಗುವು ಅವರ ಜಾತಿ, ಮತ, ಲಿಂಗ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು. ಜೊತೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಹಾಗೂ RTE, ಕಾಯಿದೆ, 2009, SMC ಅಥವಾ ಸ್ಥಳೀಯ ಪ್ರಾಧಿಕಾರ/ಶಿಕ್ಷಕರು ವಿಶೇಷ ತರಬೇತಿಯ ಅಗತ್ಯವಿರುವ ಮಕ್ಕಳನ್ನು ಗುರುತಿಸುವದರ ಬಗ್ಗೆ ಮಾಹಿತಿ ಹಾಗೂ ತರಬೇತಿ ಸಾಹಿತ್ಯಗಳಾದ ಶೋಧ ಹಾಗೂ ಆಶಯ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡರು.
ಇನ್ನೋರ್ವ ಸಂಪನ್ಮೂಲ ಅಧಿಕಾರಿಗಳು ಸರ್ಕಾರದ ಘೋಷಣೆಯಂತೆ ಶುದ್ಧ ಬರಹ, ಸ್ಪಷ್ಟ ಓದು ಎಂಬುದನ್ನು ಸಮರ್ಪಕವಾಗಿ ಜಾರಿ ಮಾಡಿ, ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು. ಯಾವುದೇ ಪಠ್ಯ ವಿಷಯದಲ್ಲಿ ಕಷ್ಟ ಎಂಬ ಮನೋಭಾವ ಹೋಗಲಾಡಿಸಲು ಪ್ರಯತ್ನಿಸಬೇಕು ಜೊತೆಗೆ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ವಿವಿಧ ಶೈಕ್ಷಣಿಕ App ಬಳಕೆ ಕುರಿತು ಶ್ರೀ ಶಂಕರ ಹಡಗಲಿ ಸಹಾಯಕ ನಿರ್ದೇಶಕರು ಪಿಎಂ ಪೋಷಣ ಅಭಿಯಾನ ಗದಗ ತಿಳಿಸಿದರು.ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಉಪ ನಿರ್ದೇಶಕರಾದ ಶ್ರೀ ಎಂ ಎ ರಡ್ಡೇರ ಪರಿಣಾಮಕಾರಿ ಸಂದರ್ಶನ,ತಪಾಸಣೆ ಹಾಗೂ ಎಫ್ ಎಲ್ ಎನ್ ಕುರಿತು ಉದಾಹರಣೆ ಸಹಿತ ಸುಧೀರ್ಘವಾಗಿ ಮಾತನಾಡಿದರು.
ಈ ಶೈಕ್ಷಣಿಕ ಕಾರ್ಯಗಾರದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಗ್ರ ಶಿಕ್ಷಣದ ಅಧಿಕಾರಿಗಳು,ಪಿಎಂ ಪೋಷಣ ಅಭಿಯಾನದ ಜಿಲ್ಲಾ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು ಜಿಲ್ಲೆಯ ಎಲ್ಲಾ ಕ್ಷೇತ್ರ ಸಮನ್ವಯಾಧಿಕಾರಿಗಳು, ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ಎಲ್ಲಾ ಸಿಆರ್ ಪಿ , ಬಿಆರ್ ಪಿ, ಇಸಿಓ, ಎಪಿಸಿಓ ಹಾಗೂ ವಿಷಯ ಪರಿಕ್ಷಕರು ಸಭೆಯಲ್ಲಿ ಹಾಜರಿದ್ದರು ಪ್ರಾರಂಭದಲ್ಲಿ ಸರೋಜಿನಿ ಬಂಡಿವಡ್ಡರವರಿಂದ ಪ್ರಾರ್ಥನೆ ಡಿವೈಪಿಸಿ ಅಧಿಕಾರಿ ಎo ಎಚ್ ಕಂಬಳಿ ಅವರಿಂದ ಸ್ವಾಗತ, ಎಂ ಎ ಯರಗುಡಿಯವರಿಂದ ನಿರೂಪಣೆ, ಶ್ರೀ ಎಂ ಎಚ್ ಸವದತ್ತಿ ಅವರಿಂದ ವಂದನಾರ್ಪಣೆ ಜರುಗಿತು ಎಂದು ಪ್ರಕಟಿಸಲು ವಿನಂತಿ ಗೌರವಗಳೊಂದಿಗೆ ಎಂ ಎಚ್ ಸವದತ್ತಿ ತಾಂತ್ರಿಕ ಸಹಾಯಕರು,ಸಮಗ್ರ ಶಿಕ್ಷಣ ಕರ್ನಾಟಕ, ಉಪ ನಿರ್ದೇಶಕರ ಕಛೇರಿ ಗದಗ