ಪ್ರಭಾಕರ ಲಾಟುಕರ , ಚೈತನ್ಯ ಬೋಂಗಾಳೆ ಮತ್ತು ಕಲ್ಲಪ್ಪ ಭಿವಸೆ ಅವರಿಗೆ “ರೋಟರಿ ವೋಕೇಶನಲ್ ಅವಾರ್ಡ್”

Sandeep Malannavar
ಪ್ರಭಾಕರ ಲಾಟುಕರ , ಚೈತನ್ಯ ಬೋಂಗಾಳೆ ಮತ್ತು ಕಲ್ಲಪ್ಪ  ಭಿವಸೆ ಅವರಿಗೆ “ರೋಟರಿ ವೋಕೇಶನಲ್ ಅವಾರ್ಡ್”
WhatsApp Group Join Now
Telegram Group Join Now

ಬೆಳಗಾವಿ:- ಯಾರೂ ಗುರುತಿಸದ ಕಾಯಕ ಜೀವಿಗಳನ್ನು ಗುರುತಿಸಿ ,ಕಾಯಕದಲ್ಲಿ ಕೈಲಾಸವನ್ನು ಕಂಡ ವಡಗಾಂವ,ಶಹಾಪೂರ ಭಾಗಗಳಲ್ಲಿ ತಪ್ಪದೆ ವೃತ್ತಪತ್ರಿಕೆಗಳನ್ನು ಹಂಚುವ ಕಾರ್ಯ ಮಾಡುತ್ತಿರುವ ಶ್ರೀ ಚೈತನ್ಯ ಬಾಬಾಸಾಹೇಬ ಬೋಂಗಾಳೆ ಮತ್ತು ಶ್ರೀ ಕಲ್ಲಪ್ಪ ಬಂಡು ಭಿವಸೆ ಅವರಿಗೆ “ರೋಟರಿ ವೋಕೇಶನಲ್ ಅವಾರ್ಡ್” ಹಾಗೂ ಯೋಗ, ಪ್ರಾಣಾಯಾಮದ ಪ್ರಾತಕ್ಷಿತೆಯ ಮೂಲಕ ಸಮಾಜದ ಸ್ವಾಸ್ಥ್ಯಕಾಪಾಡಲು ಸಮರ್ಪಣಾ ಭಾವದ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಶ್ರೀಪ್ರಭಾಕರ ರಘುನಾಥ್ ಲಾಟುಕರ ಅವರಿಗೆ ರೋಟರಿ ವೋಕೇಶನಲ್ ಅವಾರ್ಡ ಅಲ್ಲದೇ “ರೋಟರಿ ಅತ್ಯುತ್ತಮ ವಿದ್ಯಾರ್ಥಿ” ಪ್ರಶಸ್ತಿಯನ್ನು ಪಡೆದ ರಾಷ್ಟ್ರೀಯ ವಿದ್ಯಾಲಯದ ಕು.ದಕ್ಷ ಶರ್ಮಾ ಅವರಿಗೆ ₹ ೧೦೦೦೦ ಗಳ ನಗದು ಮತ್ತು ರೋಲಿಂಗ್ ಶೀಲ್ಡ ನೀಡಿ ಗೌರವಿಸಲಾದ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿಯೋಜಿತ ಜಿಲ್ಲಾ ಗವರ್ನರ್ ರೋ.ಅಶೋಕ ನಾಯಕ ಅವರು  ಕಳೆದು ೪೦-೪೫ ವರ್ಷಗಳಿಂದ ಬೆಳಗಿನ ಜಾವ ೩-೦೦ ಗಂಟೆಗೆ ಎದ್ದು,ಸಾಯಕಲ್ಲ ಮೇಲೆ ಹೋಗಿ ದಿನಪತ್ರಿಕೆಗಳನ್ನು ಸಂಗ್ರಹಿಸಿ ತಂದು,ತಪ್ಪದೇ ದಿನಂಪ್ರತಿ ಮನೆ ಮನೆಗೆ ಪತ್ರಿಕೆ ಹಂಚುವ ಕಾರ್ಯ ಮಾಡುತ್ತಿರುವ ಕಾಯಕ ಜೀವಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವವಿಸುತ್ತಿರುವ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

   ವೇದಿಕೆಯ ಮೇಲೆ ರೊ.ಉದಯಸಿಂಗ ರಜಪೂತ, ರೊ. ನಂದನ ಬಾಗಿ, ಅಸಿಸ್ಟೆಂಟ್ ಗವರ್ನರ್ ರೊ.ರಾಜೇಶ ತಳೆಗಾಂವ, ಇವೆಂಟ ಚೇರ್ಮನ್ ಡಾ.ವಿಜಯ ಪೂಜಾರ ಉಪಸ್ಥಿತರಿದ್ದರು.
    ಇದೇ ಸಂದರ್ಭದಲ್ಲಿ ಪ್ರೊ.ದೀಪಕ ಕೊಲ್ಹಾಪುರೆ ಅವರಿಗೆ ರೋಟರಿ ಸದಸ್ಯತ್ವವನ್ನು ನೀಡಲಾಯಿತು.
    ಸಮಾರಂಭದಲ್ಲಿ ರೊ.ಅಶೋಕ ಮಳಗಲಿ, ರೊ.ದಯಾನಂದ ಮಾಳಗಿ, ರೊ.ಮನೋಹರ ಜರತಾರಕರ, ರೊ.ಅಶೋಕ ಬದಾಮಿ, ರೊ.ರಾಜೀವ ದೇಶಪಾಂಡೆ, ಸತೀಶ್ ಮಿಠಾರೆ, ಸತೀಶ್ ನಾಯಕ ರೊ.ಅನೀಲ ಬಾಗಿ, ರೋಟರಿ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article