ಕಾಗವಾಡ: ತಾಲೂಕ ಕೇಂದ್ರವಾಗಿ ಬಹಳ ವರ್ಷವಾಯಿತು. ಆದರೆ ಇಲ್ಲಿನ ಸರಕಾರ ಕಛೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾವೆ.ಇದರಿಂದ ಪ್ರಜಾಸೌಧ ನಿರ್ಮಾಣಕ್ಕೆ ಶಾಸಕ ರಾಜು ಕಾಗೆ ಸರಕಾರಕ್ಕೆ ಒತ್ತಾಯ ಮಾಡಿದರು. ಸರಕಾರ ಕಂದಾಯ ಇಲಾಖೆಯಿಂದ 8. ಕೋಟಿ 60 ಲಕ್ಷ ರೂ ಮಂಜೂರುರಾಗಿದ್ದು ಇದೀಗ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬುಧವಾರ ಮಧ್ಯಾಹ್ನ ಭೇಟಿನೀಡಿ ಸ್ಥಳ ಪರಿಶೀಲಿಸಿದರು.
ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಈಗಾಗಲೇ ಪ್ರಜಾಸೌಧಕ್ಕೆ ಅನುದಾನ ಮಂಜೂರಾಗಿದೆ. ಇನ್ನು ಒಂದು ತಿಂಗಳಲ್ಲಿ ಮಳೆ ಕಡಿಮೆವಾದ ಮೇಲೆ ಸ್ಥಳದ ಮಣ್ಣನ್ನು ಟೆಸ್ಟ ಮಾಡಿ ರೀಪೋರ್ಟ ಮಾಡಿಕೊಳ್ಳುತ್ತೇವೆ ಎಂದರು. ಇನ್ನು ಜನಾಭಿಪ್ರಾಯ ಕೇಳಿದ್ದೇವೆ. ಎಲ್ಲಾ ನೂನ್ಯತೆಗಳನ್ನು ಇಟ್ಟುಕೊಂಡು ಒಂದು ಸೂಕ್ತ ನಿರ್ಧಾರಕ್ಕೆ ತೆಗೆದುಕೊಳ್ಳತ್ತೀವಿ ಎಂದರು.
ಈ ಸಮಯದಲ್ಲಿ ತಹಶಿಲ್ದಾರ ರವಿಂದ್ರ ಹಾದಿಮನಿ,ಉಪತಹಸಿಲ್ದಾರ ಅಣ್ಣಾಸಾಬ ಕೊರೆ, ಲೋಕೊಪಯೊಗಿ ಇಲಾಖೆಯ ಅಭಿಯಂತರ ಮಲ್ಲಿಕಾರ್ಜುನ ಮಗದುಮ್ಮ,ಸಿದ್ದು ಒಡಯರ ಪಿ ಎಸ್ ಆಯ್ ರಾಘವೇಂದ್ರ ಖೋತ ಪೊಲೀಸ ಸಿಬ್ಬಂದಿ ಸೇರಿದಂತೆ ಕಾಗವಾಡ ತಾಲ್ಲೂಕ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.