ಮಂಡೋಳಿ :ದೇವಸ್ಥಾನದ ಮೇಲ್ಚಾವಣಿ ಸ್ಲ್ಯಾಬ್ ಪೂಜೆ

Ravi Talawar
ಮಂಡೋಳಿ :ದೇವಸ್ಥಾನದ ಮೇಲ್ಚಾವಣಿ ಸ್ಲ್ಯಾಬ್ ಪೂಜೆ
WhatsApp Group Join Now
Telegram Group Join Now
ಬೆಳಗಾವಿ: ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದಲ್ಲಿ ಸುಮಾರು 1.80 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನೂತ‌ನ ಶ್ರೀ ಹನುಮಾನ ದೇವಸ್ಥಾನದ ಕಟ್ಟಡ ಮೇಲ್ವಿಚಾವಣಿಗೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ (ಸ್ಲ್ಯಾಬ್) ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸಚಿವರು ಇಲಾಖೆ ಕೆಲಸ ಮತ್ತು ಉಸ್ತುವಾರಿ ಜಿಲ್ಲೆಯಾಗಿರುವ ಉಡುಪಿ ಪ್ರವಾಸದಲ್ಲಿದ್ದರೂ ಕ್ಷೇತ್ರದ ಕಾಮಗಾರಿಗಳು ಮುಂದುವರಿಯಬೇಕೆನ್ನುವ ಉದ್ದೇಶದಿಂದ ಸ್ಥಳೀಯ ಮುಖಂಡರೊಂದಿಗೆ ಪೂಜೆ ನೆರವೇರಿಸಲಾಗುತ್ತಿದೆ. ಕ್ಷೇತ್ರದ ಎಲ್ಲ ಭಾಗಗಳ ಅಭಿವೃದ್ಧಿಗೆ ಸಚಿವರು ಪಣತೊಟ್ಟಿದ್ದು, ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ. ಜನರು ಸದಾ ಅವರ ಬೆನ್ನಿಗೆ ನಿಲ್ಲಬೇಕು ಎಂದು ಮೃಣಾಲ ಹೆಬ್ಬಾಳಕರ್ ವಿನಂತಿಸಿದರು.
ಈ ವೇಳೆ ಸ್ಥಳೀಯ ಮುಖಂಡರು, ಕಾಡಾ ಅಧ್ಯಕ್ಷ ಯುವರಾಜ ಕದಂ, ಮಾರುತಿ ಮಹಾದೇವ್ ಪಾಟೀಲ, ಮಾರುತಿ ಮನ್ನೊಳ್ಕರ್, ಬಾಳಾಸಾಹೇಬ್ ಕಣಬರಕರ್, ವಿನಾಯಕ ಪಾಟೀಲ, ವಿಕ್ಕಿ ಪಾಟೀಲ, ಪಾಪು ಕಾಕತ್ಕರ್, ಅಮೃತ್ ಕದಂ ಸೇರಿದಂತೆ ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article