ಬಳ್ಳಾರಿ. ಡಿ. 30.. ಬಡ ಕುಟುಂಬಗಳಿಗೆ ಆಸರೆಯಾಗಿ, ಅವರು ಗೌರವದಿಂದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುವಂತೆ ನಮ್ಮ ಸಂಸ್ಥೆ ನೀಡುತ್ತಿರುವ ಹಲವಾರು ಯೋಜನೆಗಳನ್ನು ಪ್ರತಿ ಅರ್ಹ ಕುಟುಂಬ ಸದುಪಯೋಗ ಪಡೆದುಕೊಳ್ಳಬೇಕೆಂದು, ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಹೇಳಿದರು.
ಅವರು ಬಳ್ಳಾರಿ ತಾಲೂಕ ವ್ಯಾಪ್ತಿಯ ಮೊಕ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಜೂರಾದ ವಾತ್ಸಲ್ಯ ಮನೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರು ಗೌರವದಿಂದ ಬದುಕಲು, ಬಡ ಕುಟುಂಬಗಳಿಗೆ ಆಶ್ರಯವಾಗಲು ತಮ್ಮ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಸ್ಥೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ, ಅದರಲ್ಲೂ ಸ್ವಂತ ಮನೆ ಇಲ್ಲದವರಿಗೆ ಚಿಕ್ಕ ಮನೆಯನ್ನು ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯ ಮಾಡುತ್ತಿರುವುದಾಗಿ ತಿಳಿಸಿದರು. ಅದೇ ರೀತಿಯಾಗಿ ನಮ್ಮ ಸಂಸ್ಥೆಯಿಂದ ಇನ್ನೂ ಹಲವಾರು ಯೋಜನೆಗಳು ಜಾರಿಗೊಳಿಸಲಾಗಿತ್ತಿದೆ, ಈ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳು ತಿಳಿದುಕೊಂಡು ಪ್ರತಿ ಅರ್ಹ ಕುಟುಂಬ ಸದ್ಬಳಕೆಗೆ ಮುಂದಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆಯ ತಾಲೂಕ ಯೋಜನಾಧಿಕಾರಿ ಬಸವರಾಜ್, ಮೋಕ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಫಕೀರಮ್ ವೆಂಕಟೇಶ್ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರಾದ ಕುಮಾರ್ ಗೌಡ, ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿಯದ ಆಶಾ, ಮುಖ ವಲಯದ ಮೇಲ್ವಿಚಾರಕ ಜಡೆ ಮೂರ್ತಿ, ಸೇವಾ ಪ್ರತಿನಿಧಿ ಗಂಗಾಧರ ಮತ್ತು ಚಾಮುಂಡಿ ಹಾಗೂ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಾತ್ಸಲ್ಯ ಮನೆ ಫಲಾನುಭವಿ ಶೇಖಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗಡೆಯವರಿಗೆ ಮತ್ತು ಅವರ ಧರ್ಮಪತ್ನಿಗೆ ಧನ್ಯವಾದಗಳನ್ನು ತಿಳಿಸಿದರು.


