ನೇಗಿನಹಾಳ04: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿಯ ಬಿಜೆಪಿ ಸರಕಾರ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಾ ದೇಶದ ಸಾಲವನ್ನು ೨೦೦ಲಕ್ಷ ಕೋಟಿ ಡಿ ೧೦ವರ್ಷಗಳಲ್ಲಿ ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ ಎಂದು ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಸಂಯೋಜಕಿ ರೋಹಿಣಿ ಪಾಟೀಲ ಹೇಳಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ತರಿಗೆ, ಬಡವರಿಗೆ, ಕೂಲಿ- ಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ ಸರಿಯಾದ ಸವಲತ್ತುಗಳಿಲ್ಲ ವರ್ಷದಿಂದ ವರ್ಷಕ್ಕೆ ನಿರುದ್ಯೋಗಿಗಳ ಸಂಖ್ಯೆ ಹೆಚ್ವುತ್ತಿದ್ದು ಬಿಜೆಪಿ ಸರಕಾರ ಆಡಳಿತದಲ್ಲಿ ವೈಪಲ್ಯ ಕಂಡಿದೆ ಎಂದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾದೇವಿ ಕೋಟಗಿ, ಉಪಾಧ್ಯಕ್ಷೆ ದೀಪಾ ಬೈಲವಾಡ, ಜಯಶ್ರೀ ದಿವಾಣದ, ಮಂಜುಳಾ ಮರಿತಮ್ಮನವರ, ಕವಿತಾ ಬೆಳಗಾವಿ, ಸುಭಾಷ ರುಮೋಜಿ, ಮಡಿವಾಳಪ್ಪ ಮರಿತಮ್ಮನವರ, ಸಲೀಮ ಬಸ್ತವಾಡ, ಶಿವಾನಂದ ಕುಂಕೂರ, ಚಿದಾನಂದ ಬೆಳಗಾವಿ, ಪ್ರಲ್ಹಾದ ಘಂಟಿ, ಮಲ್ಲಿಕಾರ್ಜುನ ತೋರಣಗಟ್ಟಿ, ಈರಣ್ಣಾ ಉಳವಿ, ರಾಜು ತಪರಿ, ಮಹಾಂತೇಶ ಮರಿತಮ್ಮನವರ ಹಾಗೂ ನೂರಾರು ಜನ ಯುವಕ, ಯುವತಿಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರಗೈದರು. (೦೩ ಎನ್.ಜಿ.ಪಿ ೦೨) ನೇಗಿನಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೆಪಿಸಿಸಿ ಉಸ್ತುವಾರಿ ರೋಹಿಣಿ ಬಾಬಾಸಾಹೇಬ ಪಾಟೀಲ ಕಾಂಗ್ರೇಸ್ ಅಭ್ಯರ್ಥಿಪರ ಪ್ರಚಾರ ಮಾಡಿದರು.