ರಸ್ತೆ ಅಭಿವೃದ್ಧಿ ಕಾಮಗಾರಿ: ಬಸ್ ಸಂಚಾರ ಮಾರ್ಗ ಬದಲಾವಣೆ

Ravi Talawar
ರಸ್ತೆ ಅಭಿವೃದ್ಧಿ ಕಾಮಗಾರಿ: ಬಸ್ ಸಂಚಾರ ಮಾರ್ಗ ಬದಲಾವಣೆ
WhatsApp Group Join Now
Telegram Group Join Now


ಬಳ್ಳಾರಿ,ಅ.11: ನಗರದ ಗಡಿಗಿ ಚೆನ್ನಪ್ಪ ವೃತ್ತ (ರಾಯಲ್ ಸರ್ಕಲ್) ದಿಂದ ರೈಲ್ವೇ ಕೆಳ ಸೇತುವೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ನಗರ ಸಾರಿಗೆ ಬಸ್ ನಿಲ್ದಾಣ (ಹಳೇ ಬಸ್ ನಿಲ್ದಾಣ) ದ ಮುಂದೆ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಬೇರೆ ಮಾರ್ಗಗಳಿಂದ ಸಂಚರಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.
ಸಿರುಗುಪ್ಪ ಕಡೆಗೆ ಹಾಗೂ ಮುಂದಕ್ಕೆ ಸಂಚರಿಸುವ ಬಸ್ ಗಳು ಕೇಂದ್ರಿಯ ಬಸ್ ನಿಲ್ದಾಣದಿಂದ ಹೆಚ್.ಆರ್.ಗವಿಯಪ್ಪ ವೃತ್ತ, ರೈಲ್ವೇ ಬ್ರಿಡ್ಜ್ ಮೇಲ್ಸೇತುವೆ, ಏಳು ಮಕ್ಕಳ ತಾಯಿ ದೇವಸ್ಥಾನ, ಫ್ಲೆöÊ ಓವರ್ ಮೂಲಕ ಸಂಚರಿಸಬೇಕು.
ತಾಳೂರು ಕಡೆಗೆ ಹೋಗುವ ಬಸ್ ಗಳು ನಗರದ ತಾಳೂರು ರಸ್ತೆ ಮೂಲಕ ಸಂಚರಿಸಬೇಕು. ಮೋಕಾ ಹಾಗೂ ಮುಂದೆ ಹೋಗುವ ಬಸ್ ಗಳು ಕೇಂದ್ರಿಯ ಬಸ್ ನಿಲ್ದಾಣದಿಂದ ಗಡಿಗಿ ಚೆನ್ನಪ್ಪ ವೃತ್ತ (ರಾಯಲ್ ಸರ್ಕಲ್), ಮುನ್ಸಿಪಲ್ ಕಾಲೇಜು, ಇಂದಿರಾ ವೃತ್ತ, ಕೂಲ್ ಕಾರ್ನರ್, ಎಸ್.ಎನ್.ಪೇಟೆ, ಪ್ಲೆöÊ ಓವರ್ ಮೂಲಕ ಸಂಚರಿಸಬೇಕು.
ಹಾಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article