25. ರಾಯಬಾಗ ಭೀಕರ ಗಾಳಿ ಮಿಶ್ರಿತ ಮಳೆಯಿಂದ ಅಪಾರ ಹಾನಿಯಾದ ಘಟನೆ ಗುರುವಾರ ಸಂಜೆ ನಡೆದಿದೆ. ಕಳೆದ ಹಲವು ದಿನಗಳಿಂದ ಸಾಕಷ್ಟು ಬಿಸಿಲಿನ ತಾಪಕ್ಕೆ ಜನರು ಬೆಂದಿದ್ದರು.
ಆದರೆ ಇಂದು ಗಾಳಿ ಮಿಶ್ರಿತ ಮಳೆಯಿಂದ ತಂಪಾದರೂ ಸಹಿತ ಅಪಾರ ಹಾನಿ ಮಾಡಿದೆ. ಚಿಕ್ಕೋಡಿ ತಾಲೂಕಿನ ರೂಪಿನಾಳ ಗ್ರಾಮದ ಹತ್ತಿರ ರಭಸದ ಗಾಳಿಯಿಂದ ಚಿಕ್ಕೋಡಿ- ಮೀರಜ್ ರಾಜ್ಯ ಹೆದ್ದಾರಿಯಲ್ಲಿ ಮರ ಉರುಳಿ ಸುಮಾರು ಒಂದು ಗಂಟೆಕ್ಕಿಂತಲೂ ಹೆಚ್ಚು ರಸ್ತೆ ಬಂದ್ ಆಗಿತ್ತು. ವಾಹನ ಸವಾರರು ಪರದಾಡಿದರು.
ಇನ್ನೂ ರಾಯಭಾಗ ತಾಲೂಕಿನ ಬಾವನಸೌವಂದತ್ತಿ, ಯಡ್ರಾಂವ, ನಂದಿಕುರಳಿ, ದಿಗ್ಗೇವಾಡಿ, ಜಲಾಲಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾಗು ಚಿಕ್ಕೋಡಿ ತಾಲೂಕಿನ ಮಾಂಜರಿ, ಇಂಗಳಿ, ಅಂಕಲಿ, ಯಡೂರು, ಯಕ್ಸಂಬಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಗಾಳಿ ಮಿಶ್ರೀತ ಮಳೆಯಿಂದ ಅಪಾರ ಹಾನಿಯಾಗಿದೆ ಎಂದು ತಿಳಿದು ಬಂದಿದೆ
ಮಾನವೀಯತೆ ಮೆರೆದ ಬಸ್ ಪ್ರಯಾಣಿಕರು; ಹಾಗೂ ಪತ್ರಕರ್ತ. ಸಂತೋಷ್ ಗಿರಿ: ಚಿಕ್ಕೋಡಿ- ಮೀರಜ್ ರಾಜ್ಯ ಹೆದ್ದಾರಿಯಲ್ಲಿ ಮರ ಬಿದ್ದು ರಸ್ತೆ ಬಂದ್ ಆಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಮಳೆಯ ಮಧ್ಯದಲ್ಲಿಯೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ ಪತ್ರಕರ್ತರಾದ ಸಂತೋಷ ಗಿರಿ ಅವರ ತಂಡದಿಂದ ಬಸವರಾಜ ಮೇತ್ರಿ, ದರ್ಶನ ಪಡಲಾಳೆ, ಮಹೇಶ ಬಂತೆ, ಮಲ್ಲಿಕಾರ್ಜುನ ಕೊರವಿ ಅನೇಕರು ಸೇರಿ ಮರ ಕಟ್ಟ್ ಮಾಡಿ ರಸ್ತೆಯ ಸಂಚಾರಕ್ಕೆ ಮಾರ್ಗ ಅನುಕೂಲ ಮಾಡಿಕೊಟ್ಟರು. ಇದರಿಂದ ಆತಂಕದಲ್ಲಿದ್ದ ಸಾವಿರಾರು ವಾಹನಗಳಪ್ರಯಾಣಿಕರು ನಿಟ್ಟುಸಿರು ಬಿಟ್ಟು ಅಭಿನಂದನೆ ತಿಳಿಸಿದರು.