ರೈತರ ಏಳಿಗೆಗೆ ಸಹಕಾರಿ ಸಂಘದಿಂದ ಅನೇಕ ಪ್ರಯೋಜನ: ಆರ್. ಎಮ್. ಯತ್ತಿನಮನಿ 

Ravi Talawar
ರೈತರ ಏಳಿಗೆಗೆ ಸಹಕಾರಿ ಸಂಘದಿಂದ ಅನೇಕ ಪ್ರಯೋಜನ: ಆರ್. ಎಮ್. ಯತ್ತಿನಮನಿ 
WhatsApp Group Join Now
Telegram Group Join Now
ನೇಸರಗಿ.ವಿವಿದ್ದೋದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಿಂದ  ರೈತರಿಗೆ ಬಡ್ಡಿ ರಹಿತ ಸಾಲ, ಸಬ್ಸಿಡಿ  ಬೀಜ ವಿತರಣೆ, ಯಂತ್ರೋಪಕರಣ, ಕೃಷಿ ಚಟುವಟಿಕೆ ಸಲಕರಣೆ ವಿತರಣೆ ಇನ್ನೂ ಅನೇಕ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ರಾಜಶೇಖರ ಎಮ್. ಯತ್ತಿನಮನಿ ಹೇಳಿದರು.
    ಅವರು ಶನಿವಾರದಂದು ವಿವಿದ್ದೋದೇಶ ಪ್ರಾಥಮಿಕ ಗ್ರಾಮೀಣ ಅಭಿವೃದ್ಧಿ ಕೃಷಿ ಸಹಕಾರಿ ಸಂಘ ನೇಸರಗಿ ಇದರ 117 ನೇ 2023- 24 ನೇ ಸಾಲಿನ  ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಉದ್ದೇಸಿಸಿ ಮಾತನಾಡಿ ರೈತರಿಗೆ ಟ್ರಾಕ್ಟರ್ ಸಾಲ, ಅರೋಗ್ಯ ಯಶಸ್ವಿನಿ ಕಾರ್ಡ್ ನಿಯಮಾವಳಿ ಪ್ರಕಾರ ಮಾಡಲಾಗುವದೆಂದು ಹೇಳಿದರು.
   ಸಂಘದ ಕಾರ್ಯನಿರ್ವಾಹಕ ವಿಶ್ವನಾಥ ಕೂಲಿನವರ  ವಾರ್ಷಿಕ ವಚನ ಓದಿ ಮಾತನಾಡಿ ಸಂಘವು ಪ್ರಸಕ್ತ  ವರ್ಷ ರೂ. 200028=00 ಗಳ ನಿವ್ವಳ ಲಾಭ ಮಾಡಿದೆ ಎಂದರು.
     ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ರತ್ನಾ ಎಮ್. ಪಾಟೀಲ, ಸದಸ್ಯರಾದ ವೀರಪ್ಪಣ್ಣ ಚೋಭಾರಿ, ಎಸ್ ಎಮ್. ಪಾಟೀಲ, ಮಲ್ಲೇಶಪ್ಪ ಮಾಳನ್ನವರ, ಫಕ್ಕಿರಪ್ಪಾ ಸೋಮಣ್ಣವರ, ಸಿದ್ದಪ್ಪ ತುಳಜನ್ನವರ, ಗಂಗಪ್ಪ ಕಾಡಣ್ಣವರ, ಮಹಾಂತೇಶ ಸತ್ತಿಗೇರಿ, ಶ್ರೀಮತಿ ಸಾವಿತ್ರಿ ಕೋಲಕಾರ,ಪ್ರಕಾಶ ತೋಟಗಿ, ಯಲ್ಲಪ್ಪ ತಳವಾರ, ಸುರೇಶ ಕಂಡ್ರಿ, ಮುಖಬುಲ್ ಬೇಫಾರಿ, ಹಾಗೂ ಗ್ರಾಮದ ಹಿರಿಯರಾದ  ಸೋಮಪ್ಪ ಸೋಮಣ್ಣವರ, ಶಂಕರ  ತಿಗಡಿ,ಎಮ್ ಟಿ. ಪಾಟೀಲ,ದೇಮಣ್ಣ ಗುಜನಟ್ಟಿ, ಶೇಖರ ಕಾರಜೋಳ, ಶಿವಲಿಂಗಪ್ಪ ಮಾಳನ್ನವರ, ಚನಗೌಡ ಪಾಟೀಲ, ಶಂಕರೆಪ್ಪ ಸುನಕುಂಪಿ,ಸೇರಿದಂತೆ ಮುಖಂಡರು, ನೇಸರಗಿ, ಸೋಮನಟ್ಟಿ ಗ್ರಾಮದ  ರೈತರು, ಸಿಬ್ಬಂದಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article