ಬೆಳಗಾವಿ: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಮೋಘ ಎಸ್. ಸಾಣಿಕೊಪ್ಪ ಮತ್ತು ಸುಮಿತ್ ಎಸ್. ಗಣಮುಖಿ ಅವರು ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಟೆಕ್ನೋ-ಫೆಸ್ಟ್ “ಅವಲಾಂಚ್ 25” ನಲ್ಲಿ ಪ್ರಥಮ ಸ್ಥಾನ ಗಳಿಸಿ, ರೂ. 2,000 ನಗದು ಬಹುಮಾನವನ್ನು ಪಡೆದಿದ್ದಾರೆ.
ಈ ತಂಡವು “Agility as a Mandate” ಎಂಬ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಿತು. ನಿರಂಜನ್ ಅವರು ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ, ರೂ. 1,500 ನಗದು ಬಹುಮಾನವನ್ನು ಪಡೆದಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಕೀಲ ಆರ್. ಎಸ್. ಮುತಾಲಿಕ್, ಪ್ರಾಚಾರ್ಯ ಡಾ. ಎಚ್. ಎ. ಹವಾಲ್ದಾರ, ಸಮ್ಮೇಳನ ವಿಭಾಗದ ಸಂಯೋಜಕ ಪ್ರೊ. ಶಿಲ್ಪಾ ರಾಯ್ಕರ್, ಸಾಹಿತ್ಯ ಕ್ಲಬ್ ಸಂಯೋಜಕಿ ಪ್ರೊ. ಮಧುರಿ ಕುಲಕರ್ಣಿ, ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿಜೇತರನ್ನು ಅಭಿನಂದಿಸಿದ್ದಾರೆ.


