ಯರಗಟ್ಟಿ : ಶ್ರಾವಣ ಮಾಸದ ಅಂಗವಾಗಿ ಶ್ರೀ ಮುರುಘೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ಮಿಕ ಪಥ ಸಂಚಲನ ಕಾರ್ಯಕ್ರಮ ಸಮೀಪದ ಮುನವಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರದ್ಧಾಭಕ್ತಿ ಭಾವದಿಂದ ಜರುಗಿತು. ಭಕ್ತಾದಿಗಳು ಶ್ರೀಗಳು ಬರುವ ಮಾರ್ಗಗಳಲ್ಲಿ ರಂಗವಲ್ಲಿ ಹಾಕಿ, ಶ್ರೀಗಳ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸುತ್ತಿದ್ದರು.
ಶ್ರೀಗಳ ಸಾನಿಧ್ಯದಲ್ಲಿ ಶ್ರಾವಣ ಶಿವಾನುಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಂಗಾಧರ ಗೊರಾಬಾಳ, ಈರಣ್ಣ ಸಂಕಣ್ಣವರ, ಮನೋಹರ ನಾಯ್ಕ, ಮಹಾದೇವ ಗೋಪಶೆಟ್ಟಿ, ಬಿ.ಬಿ.ಹುಲಿಗೊಪ್ಪ, ಸಂಗಮೇಶ ಹೊಳಿಮಠ, ಶಂಕರ ಗಯ್ಯಾಳಿ, ರಮೇಶ ಮುರಂಕರ, ವೈ.ಟಿ.ತಂಗೋಜಿ, ರವಿ ಮೂಲಿಮನಿ, ಗಂಗಮ್ಮ ಸಂಕಣ್ಣವರ, ಎಂ.ಜಿ.ಹೊಸಮಠ, ಅನ್ನಪೂರ್ಣ ಲಂಬೂನವರ, ಉಷಾ ಗೋಪಶೆಟ್ಟಿ, ಗೀತಾ ಜಾವೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.