ರಿತನ್ಯಾ ವಿಜಯ್  ಫಸ್ಟ್ ಲುಕ್

Ravi Talawar
ರಿತನ್ಯಾ ವಿಜಯ್  ಫಸ್ಟ್ ಲುಕ್
WhatsApp Group Join Now
Telegram Group Join Now
      ದುನಿಯಾ ವಿಜಯ್ ಪುತ್ರಿ ರಿತನ್ಯಾ ವಿಜಯ್ ಮುಖ್ಯಪಾತ್ರದಲ್ಲಿ ನಟಿಸಿರುವ ಚಿತ್ರ ‘ಲ್ಯಾಂಡ್ ಲಾರ್ಡ್’. ಚಿತ್ರದಲ್ಲಿನ  ರಿತನ್ಯಾ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ  ಚಿತ್ರತಂಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
     ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ  ರಿತನ್ಯಾ ವಿಜಯ್ ಅವರು ಭಾಗ್ಯ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಜಡೇಶ್ ಕೆ ಹಂಪಿ ನಿರ್ದೇಶನದ ಹಾಗೂ  ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ.
     ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿದ್ದ ಸಾರಥಿ ಚಿತ್ರವನ್ನು ನಿರ್ಮಿಸಿದ್ದ ಕೆ‌.ವಿ.ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ.ಕೆ.ಎಸ್ ಅವರು ಸಾರಥಿ ಫಿಲಂಸ್ ಮೂಲಕ ನಿರ್ಮಾಣ‌ ಮಾಡುತ್ತಿರುವ, ಗುರುಶಿಷ್ಯರು ಚಿತ್ರದ ನಿರ್ದೇಶಕ‌ ಹಾಗೂ ಕಾಟೇರ ಚಿತ್ರದ ಕಥಾ ಲೇಖಕರಾಗಿದ್ದಾರೆ  ಜಡೇಶ್ ಕೆ ಹಂಪಿ.  ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ  ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ ‘ಲ್ಯಾಂಡ್ ಲಾರ್ಡ್’ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ವರ್ಷದ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
WhatsApp Group Join Now
Telegram Group Join Now
Share This Article