ತುಮಕೂರು: ಹನಿಟ್ರ್ಯಾಪ್ ಯತ್ನದ ಬಗ್ಗೆ ಸೂಕ್ತ ಸಮಯ ನೋಡಿ ದೂರು ದಾಖಲಿಸುತ್ತೇನೆಂದು ಸಚಿವ ರಾಜಣ್ಣ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ನೀಡಲು ಸಮಯ ನಿಗದಿ ಮಾಡಿಕೊಂಡಿಲ್ಲ.ಸೂಕ್ತ ಸಮಯ ನೋಡಿ ದೂರು ದಾಖಲಿಸುತ್ತೇನೆಂದು ಹೇಳಿದರು.
ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಅವರ ಅಭಿಪ್ರಾಯ ಹೇಳಿದ್ದಾರೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಭೇಟಿ ಕುರಿತು ಮಾತನಾಡಿ, ಅದರಲ್ಲಿ ವಿಶೇಷತೆ ಏನಿದೆ? ಪರಸ್ಪರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ಶಾಸಕ ಮುನಿರತ್ನ ಅವರು ನೇರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹನಿಟ್ರ್ಯಾಪ್ ಜಾಲದಲ್ಲಿ ಇದ್ದಾರೆಂಬ ಹೇಳಿಕೆಗೆ ಉತ್ತರಿಸಿದ ರಾಜಣ್ಣ, ಅದು ಅವರ ಅಭಿಪ್ರಾಯ. ನನಗೆ ಗೊತ್ತಿಲ್ಲ ಎಂದರು.