ನೇಸರಗಿ. ಇಲ್ಲಿನ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಕ್ಯೋಪಾಧ್ಯಾಯರು, ಆದರ್ಶ ಗಣಿತ ಶಾಸ್ತ್ರ ಶಿಕ್ಷಕರು ಆದ ಟಿ ಎಸ್ ಹಂಪಣ್ಣವರ (78) ಇವರು ಮಂಗಳವಾರದಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಭಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ನೇಸರಗಿ ಗೆಳೆಯರ ಬಳಗ, ರಾಘವೇಂದ್ರ ಯೂತ್ ಕ್ಲಬ್, ವಿದ್ಯಾ ಮಂದಿರ ಶಾಲಾ ಬಳಗ, 1993 ರ ವಿದ್ಯಾರ್ಥಿ ಬಳಗ, ನೇಸರಗಿ ಗ್ರಾಮದ ಸರ್ಕಾರಿ ಡಿಗ್ರಿ ಕಾಲೇಜ್, ಪಿ ಯು ಕಾಲೇಜ್, ವಿದ್ಯಾ ಮಂದಿರ ಪ್ರೌಢ ಶಾಲಾ, ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಕುವೆಂಪು ಮಾದರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಅಗಲಿದ ಆದರ್ಶ ಗುರುಗಳಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.