ಎಲ್ಲ ಚುನಾವಣೆಯಲ್ಲಿ ರೆಸಾರ್ಟ್‌ ರಾಜಕೀಯ ಸಾಮಾನ್ಯ: ಸಚಿವ ಸತೀಶ್‌ ಜಾರಕಿಹೊಳಿ

Ravi Talawar
ಎಲ್ಲ ಚುನಾವಣೆಯಲ್ಲಿ ರೆಸಾರ್ಟ್‌ ರಾಜಕೀಯ ಸಾಮಾನ್ಯ: ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now
ಬೆಳಗಾವಿ: ನಮ್ಮಲ್ಲಿ ಎಂಎಲ್ಎ ಹಾಗೂ ಎಂಪಿ ಚುನಾವಣೆ ಬಿಟ್ಟರೆ ಈ ರೆಸಾರ್ಟ್‌ ರಾಜಕೀಯ ಎಲ್ಲದರಲ್ಲೂ ಅನ್ವಯಿಸುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಮದವರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಎಂಎಲ್‌ಎ ಹಾಗೂ ಎಂಪಿ ಚುನಾವಣಾ ಬಿಟ್ಟರೆ  ಸಹಕಾರ ಕ್ಷೇತ್ರ ಸೇರಿದಂತೆ ಎಲ್ಲ ಚುನಾವಣೆಯಲ್ಲೂ ಸಹ ರೆಸಾರ್ಟ್‌ ರಾಜಕೀಯ ಇದ್ದೆ ಇದೆ. ಇದು ಇಲ್ಲಿ ಸಾಮಾನ್ಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಲಿಂಗಾಯತ ಒಡೆದು ಆಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಚರ್ಚೆ ಅಷ್ಟೇ, ಇಂತಹ ಉಹಾಪೋಹ ಮಾತುಗಳಿಗೆ ಉತ್ತರ ಕೊಡಲು ಆಗುವುದಿಲ್ಲ.ಇದಕ್ಕೆ ಯಾವುದೇ ರೀತಿ ಜಿಎಸ್‌ಟಿ ಹಾಗೂ ಟ್ಯಾಕ್ಸ್ ಇಲ್ಲದರಿಂದ ಇಂತಹ ಮಾತುಗಳು ಸಾಮಾನ್ಯವಾಗಿ ಬರುತ್ತಲೇ ಇರುತ್ತವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಎಲ್ಲರಿಗೂ ಸೋಲಿನ ಬಯ ಇದ್ದೇ ಇರುತ್ತೆ: ಚುನಾವಣೆ ಎಂದ ಮೇಲೆ ಅಭ್ಯರ್ಥಿಗಳಲ್ಲಿ ಸೋಲಿನ ಭಯ ಇದ್ದೇ ಇರುತ್ತದೆ. ಯಾರಿಗೆ ಹೆಚ್ಚು ಸೋಲಿನ ಭಯ ಇರುತ್ತದೆಯೋ ಅವರೇ ಹೆಚ್ಚು ಮತಗಗಳಿಂದ ಲೀಡ್  ಪಡೆದು ಗೆದ್ದು ಬರುತ್ತಾರೆ. ಮುಖ್ಯವಾಗಿ ಚುನಾವಣೆ ಅಂದ ಮೇಲೆ ಭಯ ಇರಬೇಕು ಎಂದು ಹೇಳಿದರು.
ಕೆಲವು ಕಡೆ ಚುನಾವಣೆ ಅನಿವಾರ್ಯ : ಒಂದೆಷ್ಟು ಕ್ಷೇತ್ರಗಳಲ್ಲಿ ಹೊಂದಾಣಿಕೆ ಆದರೆ ಇನ್ನೊಂದಿಷ್ಟು ಕ್ಷೇತ್ರಗಳಲ್ಲಿ ನಮಗೆ  ಚುನಾವಣೆ ಅನಿವಾರ್ಯವಾಗಿದೆ. ಅಲ್ಲದೆ ನಿಪ್ಪಾಣಿ, ಹುಕ್ಕೇರಿ, ರಾಮದುರ್ಗದಲ್ಲಿ ಇಕಡೆ ಇದ್ದವರು ಆ ಕಡೆ, ಆ ಕಡೆ ಇದ್ದವರು ಈ ಕಡೆ ಕ್ರಾಸ್ ಮತಗಳು ಹಾಕುವುದು ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿ ನಡೆಯಲಿದೆ ಎಂದರು.
ಯಾರ ಮೇಲೆ ಪ್ರೀತಿ ಹೆಚ್ಚಿದೆಯೋ ಅವರೇ ಅಲ್ಲಿ ಗೆಲ್ಲುತ್ತಾರೆ: ಕಿತ್ತೂರು ಕ್ಷೇತ್ರದಲ್ಲಿ ಹೊಂದಾಣಿಕೆ ಪ್ರಶ್ನೆ ಇಲ್ಲವೇ ಇಲ್ಲ. ಅಲ್ಲಿ ಚುನಾವಣೆ ನಡೆಯುವುದು ಖಚಿತ. ಒಂದಿಷ್ಟು ಕಡೆ ನಮಗೆ ಹೊಂದಾಣಿಕೆಯಾದರೆ, ಇನ್ನೊಂದಿಷ್ಟು ಕಡೆ ನಮ್ಮ ಜೊತೆ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಒಂದಿಷ್ಟು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಯಾರ ಮೇಲೆ ಪ್ರೀತಿ ಹೆಚ್ಚಿದೆಯೋ ಅವರೇ ಅಲ್ಲಿ ಗೆಲ್ಲುತಾರೆ ಹೊರತು ಬೇರೆ ಯಾವ ಪ್ರಚಾರದಿಂದಲ್ಲ ಎಂದು ಹೇಳಿದರು.
‘ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸೋತರೆ, ಮುಂದೆ ಸಂಪುಟಕ್ಕೆ ಸೇರುವ ಸಾಧ್ಯತೆಗೆ ತೊಂದರೆ ಆಗಬಹುದೆಂದು ಶಾಸಕ ಅಶೋಕ ಪಟ್ಟಣ ನಾಮಪತ್ರ ವಾಪಸ್‌ ಪಡೆದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಸಕ ಅಶೋಕ ಪಟ್ಟಣ ಅವರು ಡಿಸಿಸಿ ಬ್ಯಾಂಕ್‌ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದರೆ, ಅವರೆ ಗೆಲ್ಲುತ್ತಿದ್ದರು. ನಾವು ಕೂಡಾ ಅವರಿಗೆ ಅ.19ರವರೆಗೆ ಕೂಡಿ ಒಂದು ಒಳ್ಳೆಯ ನಿರ್ಧಾರ ಮಾಡೋಣ ಎಂದು ಹೇಳಿದ್ದೇವು. ಆದರೆ ಅವರು ಒಂದು ವೇಳೆ ಸೋಲಾದರೆ ತಮಗೆ ತೊಂದರೆಯಾಗಬಹುದೆಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ನಿಪ್ಪಾಣಿಯಲ್ಲಿ ಉತ್ತಮ ಪಾಟೀಲ್‌ ಅವರಿಗೆ ಸಹಾಯ ಮಾಡಲು ಆಗಲ್ಲವೆಂದು ನಾನು ಮೊದಲೆ ಹೇಳಿದ್ದೇನೆ. ಈ ಚುನಾವಣೆಯಲ್ಲಿಅಣ್ಣಾಸಾಹೇಬ್‌ ಜೊಲ್ಲೆ ಪರ ನಿಂತಿದ್ದೇವೆ. ಅದರಂತೆ ಅವರನ್ನೇ ಆಯ್ಕೆ ಮಾಡುತ್ತೇವೆಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
WhatsApp Group Join Now
Telegram Group Join Now
Share This Article