ದೇವನಹಳ್ಳಿ ಭೂಸ್ವಾಧೀನಕ್ಕೆ ಪ್ರತಿರೋಧ | ಜುಲೈ 4 ರಂದು ಫ್ರೀಡಮ್‌ ಪಾರ್ಕ್‌ನಲ್ಲಿ ಬೃಹತ್‌ ರೈತ ಪ್ರತಿಭಟನೆ

Ravi Talawar
ದೇವನಹಳ್ಳಿ ಭೂಸ್ವಾಧೀನಕ್ಕೆ ಪ್ರತಿರೋಧ | ಜುಲೈ 4 ರಂದು ಫ್ರೀಡಮ್‌ ಪಾರ್ಕ್‌ನಲ್ಲಿ ಬೃಹತ್‌ ರೈತ ಪ್ರತಿಭಟನೆ
WhatsApp Group Join Now
Telegram Group Join Now

ಬೆಂಗಳೂರು: ದೇವನಹಳ್ಳಿ ರೈತರ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಜುಲೈ 4ರಂದು ಫ್ರೀಡಮ್‌ ಪ್ರಾರ್ಕ್‌ನಲ್ಲಿ ರೈತರು ಬೃಹತ್‌ ಪ್ರತಿಭಟನೆ ಕೈಗೊಳ್ಳಲಿದ್ದಾರೆ ಎಂದು ಸಾಮೂಹಿಕ ನಾಯಕತ್ವ ರಾಜ್ಯ ರೈತ ಸಂಘೆದ ಪಾರ್ವತಮ್ಮ ಕಳಸನ್ನವರ ತಿಳಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ ರೈತರ 1777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೋದ್ಯಮಕ್ಕಾಗಿ ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದರಿಂದ ತಾಲೂಕಿನ ರೈತರ ಕೃಷಿ ಸ್ಥಗಿತವಾಗಿ, ಕುಟುಂಬಗಳು ಬೀದಿಗೆ ಬರುವ ಸ್ಥಿತಿ ಎದುರಾಗಲಿದೆ. ಇದನ್ನು ಮನವರಿಕೆ ಮಾಡಲು 3 ವರ್ಷಗಳಿಂದ ರೈತರು, ರೈತ ಸಂಘಗಳು ನಿರಂತರ ಪ್ರತಿಭಟಿಸುತ್ತಿವೆ. ಆದರೂ ಸರ್ಕಾರ ರೈತರ ಅಳಳು ಅವಗಾಹಿಸದೇ ಸ್ವೇಚ್ಛಾಚಾರದ ನಿರ್ಧಾರಕ್ಕೆ ಮುಂದಾಗಿದೆ ಎಂದು ಕಳಸನ್ನವರ ಆರೋಪಿಸಿದ್ದಾರೆ.

ಇತ್ತೀಚೆಗೆ ಜೂನ್‌ 25 ರಂದು ಇದೇ ಸಮಸ್ಯೆಯನ್ನು ಮುಂದಿಟ್ಟುಕೊಂಡು ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿ ಸರ್ಕಾರಕ್ಕೆ, ಜನಪ್ತತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಿ ಮನವರಿಕೆ ಮಾಡಲು ಹೋದಾಗ ಅಧಿಕಾರದ ದರ್ಪ ತೋರಿಸಿದ್ದಾರೆ. ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಬಂಧಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಪಾರ್ವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂ ಸ್ವಾಧೀನ ಪ್ರಕ್ತಿಯೆ ಸ್ಥಗಿತ, ರೈತರ ಮೇಲಿನ ದೌರ್ಜನ್ಯ ವಿರೋಧಿಸಿ ಮತ್ತು ಇನ್ನಿತರ ರೈತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜುಲೈ 4 ರಂದು ಫ್ರೀಡಮ್‌ ಪಾರ್ಕ್‌ನಲ್ಲಿ ರೈತರೆಲ್ಲರೂ ʼನಾಡು ಉಳಿಸಿ ಸಮಾವೇಶʼ ಪರಿಕಲ್ಪನೆಯೊಂದಿಗೆ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಕಳಸನ್ನವರ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article