ಕುಡಿಯುವ ನೀರಿನ ಸಮಸ್ಯೆ: ನಿವಾಸಿಗಳು ಧೀಡಿರ್ ಪ್ರತಿಭಟನೆ

Ravi Talawar
WhatsApp Group Join Now
Telegram Group Join Now
ಮುದ್ದೇಬಿಹಾಳ,25: ಪಟ್ಟಣದ ವಾರ್ಡ್ ನಂ 15 ಕುಂಬಾರ ಓಣಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗುರುವಾರ ಬಡಾವಣೆಯ ನಿವಾಸಿಗಳು ಧೀಡಿರ್ ಪ್ರತಿಭಟನೆ ಮಾಡಿ ವಾರ್ಡ್ ಪುರಸಭೆ ಸದಸ್ಯರು ಬಡಾವಣೆಯ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲವೆಂದು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಇದಕ್ಕೆ ಸಂಬಂಧಿಸಿದಂತೆ ಶನಿವಾರ ವಾರ್ಡ್ ಸದಸ್ಯೆ ಪುರಸಭೆ ನಿಕಟಪೂರ್ವ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಅವರ ಮನೆ ಮುಂದೆ ಮಾಧ್ಯಮಗೋಷ್ಠಿ ಮಾಡಿ ಬಡಾವಣೆಯ ನಿವಾಸಿಗಳು ಮೊನ್ನೆ ಮಾಡಿದ ಹೋರಾಟದಲ್ಲಿ ಯಾವುದು ಸತ್ಯಾತ್ಯತೆ ಇಲ್ಲ ನಿರಾದಾರ ಆರೋಪ ಮಾಡಿದ್ದಾರೆ ಎಂದರು.
ಬಡಾವಣೆಯ ನಿವಾಸಿ ಹೆಚ್ ಆರ್ ಬಾಗವಾನ ಮಾತನಾಡಿ ನಮ್ಮ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇಲ್ಲ ಸದ್ಯ ಮಳೆಗಾಳಿಯಿಂದ ವಿದ್ಯುತ್ ಸಮಸ್ಯೆಯಾಗಿ ನಮ್ಮ ಬಡಾವಣೆ ಮಾತ್ರವಲ್ಲದೆ ಪಟ್ಟಣದ ಎಲ್ಲಡೆ ಕುಡಿಯುವ ನೀರು ಒಂದುವಾರ ಬಂದಿರಲಿಲ್ಲ ಅದು ಸರಿಹೋದ ಮೇಲೆ ಎಲ್ಲಡೆ ನೀರು ಬಂದಿವೆ ನಮ್ಮ ಬಡಾವಣೆಯಲ್ಲಿ ಬಳಕೆಗೆ 8 ಮಿನಿ ಟ್ಯಾಂಕರ್ ಗಳು ಇವೆ ಈ ಹಿಂದಿಗಿಂತ ಪ್ರತಿಭಾ ಅಂಗಡಗೇರಿಯವರು ಸದಸ್ಯರಾದ ಮೇಲೆ‌ ಹೆಚ್ಚುವರಿ ಟ್ಯಾಂಕರ ಮಾಡಿದ್ದರಿಂದ ನೀರಿನ ಸಮಸ್ಯೆ ಇಲ್ಲ ಬಡಾವಣೆಯ ಜನರ ಯಾವುದೇ ಸಮಸ್ಯೆ ಇದ್ದರು ಸದಸ್ಯರು ಸ್ಪಂದನೆ ಮಾಡ್ತಾರೆ, ಶೌಚಾಲಯಗಳ ನಿರ್ಮಾಣ ಕಸ ವಿಲೇವಾರಿ ಸೇರಿದಂತೆ ಎಲ್ಲಾ ಸಮಸ್ಯೆ ಪರಿಹರಿಸಿದ್ದಾರೆ ನಾಗರಿಕರಾಗಿ‌ ನಾವು ನಮ್ಮ ಜವಾಬ್ದಾರಿ ಅರಿತು ನಮ್ಮ ಬಡಾವಣೆಯ ಸ್ವಚ್ಚತೆಗೆ ಆದ್ಯತೆ ನೀಡಬೇಕು ಅದನ್ನು ಬಿಟ್ಟು ವೈಯಕ್ತಿಕ ಹಿತಾಸಕ್ತಿಗೆ ಸದಸ್ಯರ ಮೇಲೆ ಗೂಬೆ ಕೂರಿಸುವುದು ತಪ್ಪು ಮೊನ್ನೆ ಮಾಡಿದ ಹೋರಾಟ ರಾಜಕೀಯ ಪ್ರೇರಿತವಾಗಿದೆ ಇದನ್ನು ನಾವು ಖಂಡಿಸ್ತವೆ ಎಂದರು.
ಈ ವೇಳೆ ಬಡಾವಣೆಯ ನಿವಾಸಿಗಳಾದ ನೂರಜಾನ್ ,ಇಸ್ಮಾಯಿಲ್ ಇಂಡಿಕರ್, ಅಬ್ದುಲ್ ಅಜಿಜ್ ಬಾಗವಾನ, ಲಕ್ಷ್ಮೀ ಶಿವಯೋಗಿಮಠ, ಶೋಭಾ ಕುಂಬಾರ ಮಾತನಾಡಿ ನಮ್ಮ ಬಡಾವಣೆಯಲ್ಲಿ ಮುಂಚೆ ತಿರುಗಾಡಲು ರಸ್ತೆ ಇರಲಿಲ್ಲ ನೀರಿನ ವ್ಯವಸ್ಥೆ ಇರಲಿಲ್ಲ ಪ್ರತಿಭಾ ಅಂಗಡಗೇರಿ ಸದಸ್ಯರಾದ ಮೇಲೆ ಬಡಾವಣೆಯಲ್ಲಿ ಉತ್ತಮ ರಸ್ತೆ ಚರಂಡಿ ಸಮಸ್ಯೆ , ಕುಡಿಯುವ ನೀರಿನ ಸಮಸ್ಯೆ ಮಿನಿ ಟ್ಯಾಂಕರ್ ನಿರ್ಮಾಣ, ಮಹಿಳೆಯರಿಗೆ ಶೌಚಾಲಯ ಸೇರಿದಂತೆ ಎಲ್ಲಾ ಸೌಲಭ್ಯ ಮಾಡಿದ್ದಾರೆ ಬಡಾವಣೆಯ ಎಲ್ಲಡೆ ಬೀದಿ ದೀಪ ಅಳವಡಿಸಿದ್ದಾರೆ  ,ಕೈಯಿಂದ ಹಣ ಖರ್ಚು ಮಾಡಿ ಬೋರವೆಲ್ ರಿಪೇರಿ ಮಾಡಿದ್ದಾರೆ ಎಂದು‌ ಸದಸ್ಯರ ಅಭಿವೃದ್ಧಿ ಕಾರ್ಯಯ ಬಗ್ಗೆ ವಿವರಿಸಿದರು
ಚೇತನ ಮೋಟಗಿ ಮಾತನಾಡಿ ಮೊನ್ನೆ ನಡೆದ ಪ್ರತಿಭಟನೆ ತಮ್ಮ ಸ್ವಾರ್ಥಕ್ಕಾಗಿ ಮಾಡಿದ್ದಾರೆ ನಮ್ಮ ಬಡಾವಣೆಯಲ್ಲಿ ಯಾವ ಸಮಸ್ಯೆ ಇಲ್ಲವೆಂದರು
ಬಡಾವಣೆಯ ಪುರಸಭೆ ಸದಸ್ಯೆ ಪ್ರತಿಭಾ ಅಂಗಡಗೇರಿ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೀಡಿರ್ ಪ್ರತಿಭಟನೆ ಮಾಡುವ ಅವಶ್ಯಕತೆ ಇರಲಿಲ್ಲ ನನ್ನ ಗಮನಕ್ಕೆ ಸಮಸ್ಯೆ ಬಗ್ಗೆ ಹೇಳಿಲ್ಲಾ ನಮ್ಮ ಬಡಾವಣೆಯಲ್ಲಿ ಯಾವ ಸಮಸ್ಯೆ ಇಲ್ಲ, ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರು ಸರಬರಾಜು ಸಮಸ್ಯೆ ಸಂಪೂರ್ಣ ಪಟ್ಟಣಕ್ಕೆ ಆಗಿತ್ತು ಈ ಬಗ್ಗೆ ಮುಖ್ಯಾಧಿಕಾರಿ ಮಾತನಾಡಿದ್ದೇನೆ ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಉಂಟಾದ ಸಮಸ್ಯೆ ಪರಿಹರಿಸಲಾಗಿದೆ ಆದರೆ ನಾನು ಬಡಾವಣೆಯ ಜನರ ಯಾವುದೇ ಸಮಸ್ಯೆ ಸ್ಪಂದಿಸಿಲ್ಲವೆಂಬ ಆರೋಪ ನನಗೆ ಬೇಸರತರಿಸಿದೆ ಬಡಾವಣೆಯ ಜನರಿಗೆ ಕೇಳಿ ಬಡಾವಣೆಯಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸ ಆಗಿದೆ ಎಂದರು
ಈ ವೇಳೆ ಮೊಹಮ್ಮದ್ ಹುಸೇನ್ ಬಾಗವಾನ ,ಕಮ್ರು ಬಾಗವಾನ, ಮುನಪ ಮುರಾಳ,ಲತೀಪ್ ಬಾಗವಾನ, ಮಲ್ಲಣ್ಣ ಕುಂಬಾರ, ದಾನಮ್ಮಾ ಕುಂಬಾರ, ಶಂಕ್ರಮ್ಮ ಕುಂಬಾರ, ಶಿಬಗಂಗವ್ವ ಕುಂಬಾರ, ಅಮರಪ್ಪ ಮಡಿವಾಳರ,ಕಾಶಿಬಾಯಿ ನಾಡಗೌಡ, ಸುವರ್ಣ ಅಮರಣ್ಣವರ ಸೇರಿದಂತೆ ಕುಂಬಾರ ಓಣಿ ನಿವಾಸಿಗಳು ಉಪಸ್ಥಿತರಿದ್ದರು.
ವೈಯುಕ್ತಿಕ ದ್ವೇಷದಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಬಡಾವಣೆಯ ಜನರಿಗೆ ಗೊತ್ತು ನಾನು ಏನು ಅಭಿವೃದ್ಧಿ ಮಾಡಿದ್ದೇನೆಂದು ಕುಡಿಯುವ ನೀರಿನ ಹೋರಾಟ ಮುನ್ನ ನನ್ನ ಗಮನಕ್ಕೆ ಯಾರು ತಂದಿಲ್ಲ ಸಮಸ್ಯೆ ಬಗ್ಗೆ ಹೇಳಿಲ್ಲ ಪೋನ್ ಸಹ ಮಾಡಿಲ್ಲ ನಮ್ಮ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇಲ್ಲಾ ; ಪ್ರತಿಭಾ ಅಂಗಡಗೇರಿ ಪುರಸಭೆ ಸದಸ್ಯರು ಮಾಜಿ ಪುರಸಭೆ ಅಧ್ಯಕ್ಷರು
WhatsApp Group Join Now
Telegram Group Join Now
Share This Article