ಕೋಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ  ಮೇಲ್ದರ್ಜೆಗೇರಿಸಲು ಮನವಿ

Sandeep Malannavar
ಕೋಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ  ಮೇಲ್ದರ್ಜೆಗೇರಿಸಲು ಮನವಿ
WhatsApp Group Join Now
Telegram Group Join Now
ಬಳ್ಳಾರಿ, ಜ.22:.: ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು, ಈ ಆರೋಗ್ಯ ಕೇಂದ್ರದಿಂದ ಕೋಳೂರು ಗ್ರಾಮ ಸೇರಿದಂತೆ ಇತರ ಸುತಮುತ್ತಲಿನ  ಹಲವಾರು ಗ್ರಾಮಗಳ ಸುಮಾರು 50,000 ಕ್ಕಿಂತ ಹೆಚ್ಚಿನ ಜನರು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.  ಆದರೆ ಈ ಆಸ್ಪತ್ರೆಗೆ ಮೂಲಭೂತ ಸೌಕರ್ಯವಿಲ್ಲದೆ ಹಲವಾರು ಸಮಸ್ಯೆಗಳಿಂದ ಕೂಡಿದೆ. ಈ ಕೇಂದ್ರದಿಂದ ಪ್ರತಿದಿನ 100 ರಿಂದ 150 ವರ ರೋಗಿಗಳು ಬಂದು ತಮ್ಮ ಕಾಯಿಲೆಗೆ ಔಷಧ ಪಡೆದುಕೊಂಡು ಹೋಗುತ್ತಾರೆ.  ಆದ್ದರಿಂದ ಇಷ್ಟೆಲ್ಲಾ ಜನರು ಚಿಕಿತ್ಸೆ ಪಡೆಯುವ ಆಸ್ಪತ್ರೆಗೆ ಇಂದು ಹಲವಾರು ಸೌಲಭ್ಯಗಳ ಅವಶ್ಯಕತೆ ಇದೆ. ಒಬ್ಬ ಪ್ರಸೂತಿ ತಜ್ಞರ ಅವಶ್ಯಕತೆ ಇದೆ,  ಏಕೆಂದರೆ ಪ್ರಸೂತಿ ವೈದ್ಯರು ಇಲ್ಲದೆ ಇರುವುದರಿಂದ ಸ್ತ್ರೀರೋಗಿಗಳು ಮತ್ತು ಬಾಣಂತಿಯರು ದೂರದ ಬಳ್ಳಾರಿಗೆ ಹಾಗೂ ಕುರುಗೋಡಿಗೆ ಹೋಗಿ ಬರಬೇಕಾಗುತ್ತದೆ ಇದು ಬಡವರಿಂದ ಕೂಲಿಕಾರ್ಮಿಕರಿಂದ ಸಾಧ್ಯವಿಲ್ಲ ಮತ್ತು ರಾಷ್ಟ್ರೀಯ ಮುಖ್ಯರಸ್ತೆಯ ಇರುವುದರಿಂದ ಅಪಘಾತಗಳು ಸಂಭವಿಸಿ ಸಾವು ನೋವುಗಳು ಉಂಟಾಗುವ ಸಂಭವವಿದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ಗಜ್ಜಗೆರಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವುದರ ಜೊತೆಗೆ ಜೀವವನ್ನು  ಉಳಿಸಬೇಕಾಗಿದೆ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಸಾರ್ವಜನಿಕರ ಪರವಾಗಿ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.
WhatsApp Group Join Now
Telegram Group Join Now
Share This Article