ಮೇಯರ್ ಚುನಾವಣೆ ನಡೆಸಲು ಕಲ್ಬುರ್ಗಿ ಆಯುಕ್ತರಿಗೆ ಅಗ್ರಹ 

Ravi Talawar
ಮೇಯರ್ ಚುನಾವಣೆ ನಡೆಸಲು ಕಲ್ಬುರ್ಗಿ ಆಯುಕ್ತರಿಗೆ ಅಗ್ರಹ 
WhatsApp Group Join Now
Telegram Group Join Now
 ಬಳ್ಳಾರಿ, ಮೇ.23: ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪ ಮೇಯರ್, ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಪಾಲಿಕೆಯ ಪ್ರತಿಪಕ್ಷದ ನಾಯಕ ಸಿ.ಇಬ್ರಾಹಿಂ ಬಾಬು ಆಗ್ರಹಿಸಿದ್ದಾರೆ.
ಅವರು ಈ ಕುರಿತು ಕಲಬುರ್ಗಿ ಯ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೈ ಅವರಿಗೆ ಪತ್ರ ಬರೆದು. ಬಳ್ಳಾರಿ ಮಹಾನಗರ ಪಾಲಿಕೆಯ ಉಪ ಮೇಯರ್, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಕಳೆದ ಮಾರ್ಚ್ 28 ದಿನಾಂಕ ನಿಗಧಿ ಮಾಡಿದ್ದಿರಿ. ಆದರೆ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಮಹಾನಗರ ಪಾಲಿಕೆಯ ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತಿದ್ದು ಮತ್ತು ಪಾಲಿಕೆಯ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯುಕ್ತಿಗೊಳಿಸಲಾಗಿದೆ ಎಂದು ಕಾರಣ ನೀಡಿ ಚುನಾವಣೆಯನ್ನು ಮುಂದೂಡಿ ಈಗ ಲೋಕಸಭಾ ಚುನಾವಣೆ ಪೂರ್ಣಗೊಂಡಿದ್ದು, ಪಾಲಿಕೆಯ ಮೇಯರ್ ಚುನಾವಣೆಗೆ ಹೊಸ ದಿನಾಂಕ ಪ್ರಕಟಿಸಬೇಕೆಂದು  ಆಯುಕ್ತರಿಗೆ  ಆಗ್ರಹಿಸಿದರು
WhatsApp Group Join Now
Telegram Group Join Now
Share This Article